ಅಪ್ಪಿ ತಪ್ಪಿಯೂ ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಬೇಡಿ

Zee Kannada News Desk
Jun 12,2024


ಸೌಂದರ್ಯದ ಮೇಲೆ ಹೆಚ್ಚು ಆಸಕ್ತಿ ಎಲ್ಲರಿಗೂ ಇರುತ್ತೆ. ತಾವು ಚೆನ್ನಾಗಿ ಕಾಣಬೇಕು ಅಂಥ ಎಲ್ಲರೂ ಅಂಚುಕೊಳ್ಳೋದು ಕಾಮನ್. ಆದ್ರೆ ಇವುಗಳನ್ನ ನಿಮ್ಮ ಮುಖಕ್ಕೆ ಅಪ್ಪಿ ತಪ್ಪಿ ಹಚ್ಚಿದರು ಕೂಡ ನಿಮ್ಮ ಸೌಂದರ್ಯ ಹಾಲಗೋದು ಖಂಡಿತ.

ವಿವಿಧ ಪ್ರಾಡಕ್ಟ್ ಬಳಕೆ

ನಿಮ್ಮ ಮುಖದ ಮೇಲಿನ ಚರ್ಮ ತುಂಬಾ ಸೆನ್ಸಿಟಿವ್ ಆಗಿ ಇರುತ್ತದೆ. ಚರ್ಮ ಹೋಳಿಯ ಬೇಕು ಎನ್ನುವ ಕಾರಣಕ್ಕೆ ಒಂದೇ ಬಾರಿ ವಿವಿಧ ಪ್ರಾಡಕ್ಟ್ಗಳನ್ನು ಬಳಸುವುದರಿಂದ ನಿಮ್ಮ ಚರ್ಮ ಹಳಗುತ್ತದೆ.

ಲೋಕಲ್ ಪ್ರಾಡಕ್ಟ್ಸ್

ಮಾರುಕಟ್ಟೆಯಲ್ಲಿ ನಿಮ್ಮ ಸೌಂದರ್ಯ ಹಾಗೂ ಕಾಂತಿ ಹೆಚ್ಚಿಸುವಂತೆ ಮಾತು ಕೊಡುವ ಪ್ರಾಡಕ್ಟ್ ಗಳು ಬಹಳಷ್ಟು ಲಭ್ಯವಿವೆ ಆದರೆ ಅವುಗಳನ್ನ ನೀವು ನಂಬಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಲೋಕಲ್ ಪ್ರಾಡಕ್ಟ್ಸ್ ನಲ್ಲಿ ಉಪಯೋಗಿಸುವ ರಾಸಾಯನಿಕಗಳು ನಿಮ್ಮ ಚರ್ಮ ವನ್ನು ಹಾಳ ಮಾಡುತ್ತವೆ.

ಬಿಸಿ ನೀರು

ಮುಖಕ್ಕೆ ನಾವು ಬಿಸಿ ನೀರು ಹಾಕಿ ತೊಳೆಯೋದು ಕಾಮನ್. ಆದರೆ ಇದುವೇ ನಿಮ್ಮ ಚರ್ಮಕ್ಕೆ ಅಪಾಯ ತಂದೊಡ್ಡುತ್ತದೆ.ಬಿಸಿ ನೀರು ಹಾಕಿ ಮುಖ ತೊಳೆಯಿದರಿಂದ ಚರ್ಮ ತನ್ನ ನೈಸರ್ಗಿಕ ಗುಣಗಳನ್ನ ಕಳೆದುಕೊಳ್ಳುತ್ತದೆ.

ಟೂತ್ ಪೇಸ್ಟ್

ಯೂಟ್ಯೂಬ್ ಅಲ್ಲಿ ಇಲ್ಲಿ ಅಂತ ಟಿಪ್ಸ್ ನೋಡಿ ನಾವು ಮುಖದ ಮೇಲೆ ಟೂತ್ ಪೇಸ್ಟ್ ಒಮ್ಮೆ ಯಾದ್ರು ಉಪಯೋಗಿಸಿರ್ತೀವಿ. ಆದರೆ ಟೂತ್ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಬಳಸುವುದರಿಂದ ನಿಮ್ಮ ಚರ್ಮದಲ್ಲಿರುವ ಸ್ಕಿನ್ ಸೆಲ್ಸ್ ಗೆ ಹಾನಿಯಾಗುತ್ತದೆ.

ಹೇರ್ ಪ್ರಾಡಕ್ಟ್ಸ್

ಅಪ್ಪಿ ತಪ್ಪಿಯೂ ಹೇರ್ ಪ್ರಾಡಕ್ಟ್ಸ್ ಅನ್ನು ಮುಖಕ್ಕೆ ಸೂಕಿಸಬೇಡಿ ಇದರಲ್ಲಿ ಉಪಯೋಗಿಸಲ್ ಪಡುವ ರಾಸಾಯನಿಕಗಳು ನಿಮ್ಮ ಮುಖದ ಚರ್ಮಕ್ಕೆ ಒಳ್ಳೆಯದಲ್ಲ. ಇದು ಕಿರಿಕಿರಿಯನ್ನು ಉಂಟುಮಾಡಿ ಮೊಡವೆಗಳು ಮೂಡುವುದಲಕ್ಕೆ ಕಾರಣವಾಗುತ್ತದೆ.

ಬಾಡಿ ಲೋಶನ್

ಬಾಡಿ ಲೋಶನ್ ನಾರ್ಮಲ್ ಆಗಿ ಮಂದವಾಗಿ ಇರುವ ಚರ್ಮಕ್ಕಾಗಿ ತಯಾರಿಸಲಾಗಿರುತ್ತದೆ. ಆದರೆ ಮುಖದ ಮೇಲಿನ ಚರ್ಮ ಸೂಕ್ಷ್ಮ ವಾಗಿ ಇರುವುದರಿಂದ ಲೋಶನ್ ಅನ್ನು ನೀವು ಮುಖಕ್ಕೆ ಹಚ್ಚಿದರೆ ಇದು ನಿಮ್ಮ ಮುಖದ ಚರ್ಮವನ್ನು ಹಾಲು ಮಾಡುತ್ತದೆ.

ಎಣ್ಣೆ

ಕೆಲವರಿಗೆ ಮುಖಕ್ಕೆ ತೆಂಗಿನ ಎಣ್ಣೆ ಅಥವಾ ಆಲಿವ್ ಆಯಿಲ್ ಹಚ್ಚುವ ಅಭ್ಯಾಸವಿರುತ್ತದೆ. ಡೈರೆಕ್ಟ್ ಆಗಿ ಎಣ್ಣೆಗಳನ್ನ ಹಚ್ಚುವುದರಿಂದ ಅದು ಮುಖದಲ್ಲಿನ ರಂಧ್ರಗಳನ್ನು ಮುಚ್ಚಿ ಹಾಕುತ್ತದೆ. ಇದು ಮುಖದ ಮೇಲೆ ಮೊಡವೆ ಮೂಡಲು ಕಾರಣವಾಗುತ್ತದೆ.

ಬ್ರಾಂಡೆಡ್ ಪ್ರಾಡಕ್ಟ್ಸ್

ಬ್ರಾಂಡೆಡ್ ಹಾಗೂ ನಂಬಿಕಸ್ಥ ಪ್ರಾಡಕ್ಟ್ಸ್ ಬಳಕೆ ತುಂಬಾ ಉತ್ತಮ. ನೀವು ಯಾವುದರು ಪ್ರಾಡಕ್ಟ್ ನಿಮ್ಮ ಮುಖಕ್ಕೆ ಹಚ್ಚುವುದಕ್ಕಿಂತ ಮುನ್ನ ತಜ್ಞರನ್ನು ಸಂಪರ್ಕಿಸುವುದು ಉತ್ತಮ.


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story