ಜಿಗುಟು ಜಿಗುಟಾದ ಕಾವಲಿ ಸ್ವಚ್ಚಗೊಳಿಸಲು ಕೇವಲ ಒಂದು ಚಮಚ ಗೋಧಿ ಹಿಟ್ಟು ಸಾಕು !

Ranjitha R K
Dec 09,2024

ಪ್ಯಾನ್ ಶುಚಿಗೊಳಿಸುವುದು ಹೇಗೆ

ಚಪಾತಿ, ದೋಸೆ ಮಾಡಲು ಕಾವಲಿ ಬಳಸುತ್ತೇವೆ. ದೀರ್ಘಕಾಲದವರೆಗೆ ಇದನ್ನು ಬಳಸುವುದರಿಂದ, ಅದರ ಸುತ್ತಲೂ ಕಪ್ಪು ಜಿಗುಟಾದ ಪದರವು ಸಂಗ್ರಹಗೊಳ್ಳುತ್ತದೆ.

ಸಾಬೂನು ಮತ್ತು ಹಿಟ್ಟಿನ ಮಿಶ್ರಣ

ಈ ಜಿಗುಟನ್ನು ತೆಗೆಯಲು ಮೊದಲು ಸಾಬೂನನ್ನು ಚೂರು ಚೂರಾಗಿ ಮಾಡಿ ಅದನ್ನು ಪ್ಯಾನ್ ಮೇಲೆ ಹರಡಿ, ಅದರ ಮೇಲೆ ಗೋಧಿ ಹಿಟ್ಟನ್ನು ಹರಡಿ.

3 ನಿಮಿಷಗಳವರೆಗೆ ಬಿಸಿ ಮಾಡಿ

ಇದೀಗ ಈ ಪ್ಯಾನ್ ಅನ್ನು ಗ್ಯಾಸ್ ಮೇಲಿಟ್ಟು ಓಲೆ ಹಚ್ಚಿ. 2-3 ನಿಮಿಷಗಳವರೆಗೆ ಬಿಸಿ ಮಾಡಿ

ಜಿಗುಟುತನ ಮಾಯವಾಗುತ್ತದೆ

ಈ ಮಿಶ್ರಣವನ್ನು ಪ್ಯಾನ್ ಸುತ್ತಲೂ ಹರಡಿ. ಹೀಗೆ ಮಾಡುವುದರಿಂದ ಹಿಟ್ಟು ಜಿಗುಟುತನವನ್ನು ತೆಗೆದು ಹಾಕುತ್ತದೆ.

ಮಿಶ್ರಣಕ್ಕೆ ಸ್ವಲ್ಪ ನೀರು ಬೆರೆಸಿ

ಈಗ ಸೋಪು ಮತ್ತು ಹಿಟ್ಟಿನ ಮಿಶ್ರಣಕ್ಕೆ ಸ್ವಲ್ಪ ನೀರು ಬೆರೆಸಿ ಇದನ್ನು ಪ್ಯಾನ್ ಸುತ್ತ ಹರಡಿಕೊಳ್ಳಿ.

ಪ್ಯಾನ್ ಹೊಳೆಯುತ್ತದೆ

ಒಂದೆರಡು ನಿಮಿಷಗಳ ಕಾಲ ಹಾಗೆಯೇ ಬಿಡಿ.ಇದನ್ನು ಸ್ವಚ್ಛ ಮಾಡಿದರೆ ಪ್ಯಾನ್ ಸಂಪೂರ್ಣವಾಗಿ ಹೊಳೆಯಲು ಆರಂಭವಾಗುತ್ತದೆ.

ನೀರಿನಿಂದ ತೊಳೆಯಿರಿ

ಪ್ಯಾನ್ ಅನ್ನು ನೀರು ಹಾಕಿ ಚೆನ್ನಾಗಿ ತೊಳೆಯಿರಿ.ಒಂದು ವೇಳೆ ಚಿಗುಟು ಉಳಿದಿದ್ದರೆ ಈ ಪ್ರಕ್ರಿಯೆಯನ್ನು ಪುನಾವರ್ತಿಸಿ.

ಲಾಂಡ್ರಿ ಸೋಪ್ ಬಳಸಿ

ನೀವು ಬಟ್ಟೆಗೆ ಬಳಸುವ ಸೋಪನ್ನು ಬಳಸಿ ಕೂಡಾ ಪ್ಯಾನ್ ಅನ್ನು ಸ್ವಚ್ಚಗೊಳಿಸಬೇಕು.


ಈ ರೀತಿಯಾಗಿ ಪ್ಯಾನ್ ಅನ್ನು ಕೇವಲ 5 ನಿಮಿಷಗಳಲ್ಲಿ ಪ್ಯಾನ್ ಅನ್ನು ಸ್ವಚ್ಚಗೊಳಿಸಬಹುದು.

VIEW ALL

Read Next Story