ಹೇರ್ ಫಾಲ್ ಸಮಸ್ಯೆಗೆ ಸುಲಭವಾದ ಬೆಸ್ಟ್ ಮನೆಮದ್ದುಗಳು..!

Yashaswini V
Feb 16,2025

ಹೇರ್ ಫಾಲ್

ಮಾಲಿನ್ಯ, ಕಳಪೆ ಆಹಾರ ಪದ್ದತಿ, ಒತ್ತಡ ಭರಿತ ಜೀವನಶೈಲಿಯಿಂದಾಗಿ ಮಹಿಳೆ ಮತ್ತು ಪುರುಷರಲ್ಲಿ ಹೇರ್ ಫಾಲ್ ಸಮಸ್ಯೆ ಸಾಮಾನ್ಯವಾಗಿದೆ. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.

ಮೆಂತ್ಯ

ಮೆಂತ್ಯ ಕಾಳುಗಳಲ್ಲಿ ಪ್ರೊಟೀನ್, ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ರಾತ್ರಿಯಿಡೀ ಮೆಂತ್ಯ ಕಾಳುಗಳನ್ನು ನೆನೆಸಿಟ್ಟು ಬೆಳಿಗ್ಗೆ ಅದನ್ನು ಮಿಕ್ಸಿಯಲ್ಲಿ ರುಬ್ಬಿ ಹೇರ್ ಪ್ಯಾಕ್ ರೀತಿ ಅನ್ವಯಿಸಿ. 30 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿ.

ನಿಂಬೆ ರಸ

ನಿಂಬೆರಸ ನೆತ್ತಿಯ pH ಮಟ್ಟವನ್ನು ಸಮತೋಲನಗೊಳಿಸಲು ಪರಿಣಾಮಕಾರಿ ಆಗಿದೆ. ಇದು ಕೂದಲು ಉದರುವಿಕೆಯನ್ನು ನಿಯಂತ್ರಿಸಿ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ನೆಲ್ಲಿಕಾಯಿ

ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿ ಪುಡಿಯನ್ನು ಹೇರ್ ಪ್ಯಾಕ್ ಆಗಿ ಬಳಸುವುದರಿಂದ ಕೂದಲಿನ ಕಿರುಚೀಲಗಳು ಸ್ಟ್ರಾಂಗ್ ಆಗುತ್ತದೆ. ಹೇರ್ ಫಾಲ್ ಕಡಿಮೆಯಾಗುತ್ತದೆ.

ಕೊಬ್ಬರಿ ಎಣ್ಣೆ

ವಾರದಲ್ಲಿ 2-3 ಬಾರಿ ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ಹೇರ್ ಫಾಲ್ ನಿವಾರಣೆಯಾಗುತ್ತದೆ.

ಮೊಟ್ಟೆ

ಪ್ರೊಟೀನ್, ಅಮೈನೋ ಆಮ್ಲಗಳ ಮೂಲವಾಗಿರುವ ಮೊಟ್ಟೆಯಲ್ಲಿರುವ ಪ್ರೊಟೀನ್ ಹೇರ್ ಫಾಲ್ ಕಡಿಮೆಯಾಗುತ್ತದೆ. ಇದರಿಂದ ಕೂದಲು ರೇಷ್ಮೆಯಂತೆ ಹೊಳೆಯುತ್ತದೆ.

ಆಲಿವ್ ಎಣ್ಣೆ

ಕೊಬ್ಬರಿ ಎಣ್ಣೆಯಂತೆ ಆಲಿವ್ ಎಣ್ಣೆಯು ಕೂಡ ಕೂದಲನ್ನು ಬುಡದಿಂದ ಪೋಷಿಸುತ್ತದೆ.

ಅಗಸೆಬೀಜದ ಎಣ್ಣೆ

ಅಗಸೆ ಬೀಜದ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಹೇರ್ ಫಾಲ್ ನಿವಾರಣೆಗೆ ಪರಿಣಾಮಕಾರಿ ಮದ್ದಾಗಿದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story