ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ದೊಡ್ಡ ಕೆಲಸ.ಆದರೆ ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ತಂತ್ರ ತಿಳಿದರೆಕ್ಷಣಮಾತ್ರದಲ್ಲೇ ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಿಯಬಹುದು.
ಬೆಳ್ಳುಳ್ಳಿಯನ್ನು ಬಿಸಿ ಮಾಡುವ ಮೂಲಕ ಅದರ ಸಿಪ್ಪೆಯನು ಸುಲಭವಾಗಿ ತೆಗೆಯಬಹುದು. ಇದಕ್ಕಾಗಿ ಬೆಳ್ಳುಳ್ಳಿಯನ್ನು 20 ಸೆಕೆಂಡುಗಳವರೆಗೆ ಓವನ್ ನಲ್ಲಿ ಇಡಬೇಕು.
ಒಂದು ವೇಳೆ ನಿಮ್ಮ ಬಲಿ ಮೊಕ್ರೋವೆವ್ ಇಲ್ಲ ಎಂದಾದರೆ ತವಾದ ಮೇಲೆ ಬೆಳ್ಳುಳ್ಳಿ ಹಾಕಿ ಬಿಸಿ ಮಾಡಬಹುದು.
ಅಲ್ಲದೆ ಬೆಳ್ಳುಳ್ಳಿಯನ್ನು ಸ್ವಲ್ಪ ಜಜ್ಜಿದರೂ ಸುಲಭವಾಗಿ ಸಿಪ್ಪೆಯನ್ನು ತೆಗೆಯಬಹುದು.
ಬಿಸಿ ನೀರಿನಲ್ಲಿ ಬೆಳ್ಳುಳ್ಳಿಯನ್ನು ನೆನೆ ಹಾಕುವುದರಿಂದಲೂ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.
ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಿಯಲು ಚಾಕುವಿನ ಸಹಾಯವನ್ನು ತೆಗೆದುಕೊಳ್ಳಬಹುದು. ಬೆಳ್ಳುಳ್ಳಿ ಎಸಳಿನ ಮಧ್ಯೆ ಚಾಕುವನ್ನು ಹಾಕಿ ಸುಲಭವಾಗಿ ಬಿಡಿಸಬಹುದು.
ಬೆಳ್ಳುಳ್ಳಿಯನ್ನು ಕಾಕ್ ಟೆಲ್ ಶೇಕರ್ ಅಥವಾ ಮುಚ್ಚಳವಿರುವ ದೊಡ್ಡ ಪಾತ್ರೆಯಲ್ಲಿ ಬೆಳ್ಳುಳ್ಳಿ ಹಾಕಿ ಷೇಕ್ ಮಾಡಿ. ಇದರಿಂದ ಬೆಳ್ಳುಳ್ಳಿಯ ಸಿಪ್ಪೆಯನು ಸುಲಭವಾಗಿ ತೆಗೆಯಬಹುದು.
ಇದಲ್ಲದೆ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯಲು ಕಲ್ಲನ್ನು ಬಳಸಬಹುದು.