ಡ್ಯಾಂಡ್ರಫ್ ನಿವಾರಿಸಿ ದಷ್ಟಪುಷ್ಟವಾದ ರೇಷ್ಮೆಯಂತಹ ಕೂದಲಿಗಾಗಿ ಈ ಆಹಾರಗಳನ್ನು ಸೇವಿಸಿ

Yashaswini V
Jan 20,2025

ಡ್ಯಾಂಡ್ರಫ್

ಬದಲಾದ ಋತು, ಧೂಳು, ಮಾಲಿನ್ಯದಿಂದಾಗಿ ತಲೆಹೊಟ್ಟು, ತುರಿಕೆ ಸಾಮಾನ್ಯ. ಇದರಿಂದಾಗಿ ಕೂದಲು ದುರ್ಬಲಗೊಳ್ಳುತ್ತದೆ.

ನೆತ್ತಿಯಲ್ಲಿ ತುರಿಕೆ

ತಲೆಹೊಟ್ಟಿನ ಸಮಸ್ಯೆ ಹೆಚ್ಚಾದಂತೆ ನೆತ್ತಿಯಲ್ಲಿ ಬಿಳಿ ಪದರವು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯನ್ನು ಉಂಟು ಮಾಡಬಹುದು. ಇದು ಕೂಡಲ ಆಕರ್ಷಣೆಯನ್ನು ಸಹ ಕೆಡಿಸುತ್ತದೆ.

ಮನೆಮದ್ದು

ಆದಾಗ್ಯೂ, ನಿಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ಕೆಲವು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸುವುದರಿಂದ ತಲೆಹೊಟ್ಟು ನಿವಾರಣೆಯಾಗಿ ಕಾಂತಿಯುತ ಉದ್ದ ಕೂದಲನ್ನು ನಿಮ್ಮದಾಗಿಸಬಹುದು.

ಆರೋಗ್ಯಕರ ಕೊಬ್ಬಿನ ಆಹಾರ

ಒಮೆಗಾ 3, ಒಮೆಗಾ 6ನಂತಹ ಅತ್ಯುತ್ತಮ ಕೊಬ್ಬಿನಾಮ್ಲಗಳ ಮೂಲವಾಗಿರುವ ಕಡಲೆಕಾಯಿ ಬೆಣ್ಣೆ, ಅಗಸೆಬೀಜ, ಆಲೀವ್ ಎಣ್ಣೆ, ಸಾಲ್ಮನ್ ಮೀನುಗಳನ್ನು ತಿನ್ನುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ.

ಪ್ರಿಬಯಾಟಿಕ್ ಆಹಾರ

ಪ್ರಿಬಯಾಟಿಕ್‌ಗಳಲ್ಲಿ ಸಮೃದ್ಧವಾಗಿರುವ ಸಸ್ಯಾಧಾರಿತ ಆಹಾರಗಳನ್ನು ತಿನ್ನುವುರಿಂದ ತಲೆಹೊಟ್ಟು ಉಂಟುಮಾಡುವ ಸೋಂಕಿನ ವಿರುದ್ಧ ರಕ್ಷಣೆ ದೊರೆತು ಕೂದಲು ಹೊಳೆಯುವಂತೆ ಮಾಡಬಹುದು.

ಪ್ರೊಟೀನ್ ರಿಚ್ ಫುಡ್

ಮೊಟ್ಟೆ, ಬಾದಾಮಿ, ಹಾಲು, ಓಟ್ಸ್, ಚಿಕನ್ ಸ್ತನದಂತಹ ಪ್ರೊಟೀನ್ ಹೆಚ್ಚಾಗಿರುವ ಆಹಾರಗಳನ್ನು ನಿತ್ಯ ಸೇವಿಸುವುದರಿಂದ ಇದು ತಲೆಹೊಟ್ಟು ನಿವಾರಿಸಿ ಕೂದಲಿನ ತೇವಾಂಶವನ್ನು ಸಮತೋಲನಗೊಳಿಸುತ್ತದೆ.

ಸತು

ಕೂದಲಿನ ನೆತ್ತಿಯು ಮೇದೋಗ್ರಂಥಿ ಎಂಬ ನೈಸರ್ಗಿಕ ತೈಲವನ್ನು ಉತ್ಪಾದಿಸುತ್ತದೆ. ಇದು ಬಾಹ್ಯಹಾನಿಯಿಂದ ರಕ್ಷಿಸುತ್ತದೆ. ಅಣಬೆ, ಚಿಕನ್, ಬೀನ್ಸ್ ನಂತಹ ಸತು ಸಮೃದ್ಧ ಆಹಾರ ಸೇವನೆಯಿಂದ ತಲೆಹೊಟ್ಟು ಸಮಸ್ಯೆ ನಿವಾರಿಸಿ, ನೆತ್ತಿಯನ್ನು ಆರೋಗ್ಯವಾಗಿರಿಸಬಹುದು.

ಹಣ್ಣು ತರಕಾರಿಗಳು

ಪಾಲಕ್ ಸೊಪ್ಪಿನಂತ ಆಹಾರಗಳನ್ನು ತಿನ್ನುವುದರಿಂದ ಇದು ತಲೆಹೊಟ್ಟು ನಿವಾರಿಸಿ ನೆತ್ತಿಯನ್ನು ಆರೋಗ್ಯವಾಗಿರಿಸುತ್ತದೆ. ಜೊತೆಗೆ ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸಿ, ಕಾಂತಿಯುತವಾಗಿರಿಸುತ್ತದೆ.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story