ಕೂದಲಲ್ಲಿ ಹೇನು, ಸೀರುಗಳಿದ್ದರೆ ಆಗಾಗ್ಗೆ ತುರಿಕೆಯಾಗುವುದಲ್ಲದೆ, ಕೆಲವೊಮ್ಮೆ ಇದು ಮುಜುಗರಕ್ಕೀಡು ಮಾಡುತ್ತದೆ. ಇವುಗಳು ಕೆಲ ಸಂದರ್ಭದಲ್ಲಿ ಹೆಚ್ಚಾಗಿ ಬೆಳೆಯಲು ಪ್ರಾರಂಭಿಸುವುದಲ್ಲದೆ, ದೇಹದ ಮೇಲೆಯೂ ಓಡಾಡಲು ಪ್ರಾರಂಭಿಸುತ್ತವೆ.
ಹೇನು, ಸೀರುಗಳನ್ನು ಹೋಗಲಾಡಿಸಲು ನಿಮಗೆ ಕೆಲವು ಪರಿಹಾರಗಳನ್ನು ಹೇಳುತ್ತಿದ್ದೇವೆ. ಇವು ನಿಮ್ಮ ಸಮಸ್ಯೆಗಳಿಗೆ ತಕ್ಷಣವೇ ಶಾಶ್ವತ ಮುಕ್ತಿ ನೀಡಬಹುದು.
ಹೇನುಗಳು ಮಾನವನ ರಕ್ತದ ಮೇಲೆ ಬದುಕುವ ಒಂದು ರೀತಿಯ ಜೀವಿ. ಒಬ್ಬ ವ್ಯಕ್ತಿಯ ಕೂದಲಿನಲ್ಲಿ ಹೇನುಗಳಿದ್ದರೆ, ಅದು ಇನ್ನೊಬ್ಬ ವ್ಯಕ್ತಿಯ ತಲೆಗೆ ಹರಡುವುದರಲ್ಲಿ ಅನುಮಾನವೇ ಇರುವುದಿಲ್ಲ. ಹೇನುಗಳ ವಿಶೇಷತೆಯೆಂದರೆ ಅವು ರಾತ್ರಿಯಿಡೀ ಲೆಕ್ಕವಿಲ್ಲದಷ್ಟು ಮೊಟ್ಟೆಗಳನ್ನು ಉತ್ಪಾದಿಸುತ್ತವೆ ಎಂದು ಹೇಳಲಾಗುತ್ತದೆ.
ತಲೆಯಲ್ಲಿ ಬಹಳಷ್ಟು ಹೇನುಗಳು ಇದ್ದಾಗ, ಬ್ಯಾಕ್ಟೀರಿಯಾ ವಿರೋಧಿ ಬೇವು ಅತ್ಯುತ್ತಮ ಆಯ್ಕೆ. ಒಂದು ಕಪ್ ಬೇವಿನ ಎಲೆಗಳನ್ನು ಕುದಿಸಿ ಪೇಸ್ಟ್ ಮಾಡಿ. ಇದನ್ನು ಕೂದಲಿಗೆ ಹಚ್ಚಿ 2 ಗಂಟೆಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ಬೇವಿನಲ್ಲಿ ಕೀಟನಾಶಕ ಅಂಶವಿದ್ದು, ಸಂತಾನೋತ್ಪತ್ತಿ ಮಾಡುವುದನ್ನು ತಡೆಯುತ್ತದೆ.
ಆಲಿವ್ ಎಣ್ಣೆಯಿಂದ ಹೇನುಗಳು ಬೇಗನೆ ಸಾಯುತ್ತವೆ. ಇದನ್ನು ಹಚ್ಚಿದರೆ ಒಂದೆ ರಾತ್ರಿಯಲ್ಲಿ ಹೇನುಗಳು ಕಣ್ಮರೆಯಾಗುತ್ತವೆ ಎಂದು ಹೇಳಲಾಗುತ್ತದೆ, ಆದರೆ ರಾತ್ರಿಯಿಡೀ ಕೂದಲಿಗೆ ಈ ಎಣ್ಣೆಯನ್ನು ಹಚ್ಚಿ ಬಿಡಬೇಕಾಗುತ್ತದೆ.
ಆಪಲ್ ಸೈಡರ್ ವಿನೆಗರ್ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡುವ ಮೂಲಕ ಹೇನುಗಳನ್ನು ಸುಲಭವಾಗಿ ಕೊಲ್ಲಬಹುದು. ಆಪಲ್ ವಿನೆಗರ್’ನಲ್ಲಿ ಒಂದು ಚಮಚ ತೆಂಗಿನ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿ ರಾತ್ರಿಯಿಡೀ ಹಾಗೆಯೇ ಬಿಡಬೇಕು. ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆದರೆ ಉತ್ತಮ.
ಈರುಳ್ಳಿ ರಸವನ್ನು ಸಹ ಕೂದಲಿಗೆ ಹಚ್ಚಿ ಸುಮಾರು 3 ರಿಂದ 4 ಗಂಟೆಗಳ ಕಾಲ ಬಿಡಿ. ಹೀಗೆ ಮಾಡಿದ ಬಳಿಕ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ, ಇದು ಕೂಡ ಹೇನುಗಳ ಸಮಸ್ಯೆಯಿಂದ ಪರ್ಮನೆಂಟ್ ಮುಕ್ತಿ ನೀಡುತ್ತದೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ