ಮುಖವಷ್ಟೇ ಅಲ್ಲ.. ಕೂದಲು ಕೂಡ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಆದ್ದರಿಂದ ತ್ವಚೆಯ ಜೊತೆಗೆ ಕೂದಲಿನ ಬಗ್ಗೆಯೂ ವಿಶೇಷ ಕಾಳಜಿ ವಹಿಸುವುದು ಅಗತ್ಯ.
ಅನೇಕ ಜನರು ದಪ್ಪವಾದ, ಬಲವಾದ ಕೂದಲನ್ನು ಪಡೆಯಬೇಕೆಂದು ಬಯಸುತ್ತಾರೆ. ಆದರೆ ಧೂಳು, ಮಾಲಿನ್ಯ, ಕೊಳಕು ಮತ್ತು ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಕೂದಲು ಉದುರಲು, ಬಿಳುಪಾಗಲು ಪ್ರಾರಂಭವಾಗುತ್ತದೆ.
ಇಂತಹ ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಮನೆಯಲ್ಲಿ ಹಲವಾರು ಮನೆಮದ್ದುಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಮನೆಮದ್ದನ್ನು ಮೊಟ್ಟೆಯಿಂದ ತಯಾರಿಸಬಹುದು.
ಅನೇಕ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಮೊಟ್ಟೆಗಳನ್ನು ಕೂದಲಿಗೆ ಹಚ್ಚುವ ಮೂಲಕ ನೀವು ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.
ಮುಖ್ಯವಾಗಿ ಒಣ ಕೂದಲಿದ್ದರೆ ಮೊಟ್ಟೆಯ ಹಳದಿ ಭಾಗದ ಹೇರ್ ಮಾಸ್ಕ್, ಎಣ್ಣೆಯುಕ್ತ ಕೂದಲಿಗೆ ಮೊಟ್ಟೆಯ ಬಿಳಿ ಭಾಗದ ಮಾಸ್ಕ್ ಬಳಸಿದರೆ ಬೆಸ್ಟ್.
ಇದರ ಜೊತೆಗೆ ಅಲೋವೆರಾ, ಗೋರಂಟಿ, ತೆಂಗಿನ ಎಣ್ಣೆ, ಬಾಳೆಹಣ್ಣು, ಅವಕಾಡೋ ಹೀಗೆ ವಿವಿಧ ವಸ್ತುಗಳನ್ನು ಪ್ರತ್ಯೇಕವಾಗಿ ಮಿಕ್ಸ್ ಮಾಡಿ ಹಚ್ಚಿದರೆ ಕೂದಲಿಗೆ ಉತ್ತಮ.
ಇದು ಅಕಾಲಿಕ ಬಿಳಿಕೂದಲಿನ ಸಮಸ್ಯೆಯನ್ನೂ ಸಹ ದೂರ ಮಾಡುತ್ತದೆ. ಇನ್ನು ಇವುಗಳಲ್ಲಿ ಯಾವುದಾದರು ಒಂದು ವಿಧಾನವನ್ನು ವಾರದಲ್ಲಿ ಎರಡು ಬಾರಿ ಅಳವಡಿಸಿಕೊಂಡರೆ ಕೂದಲು ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ.
(ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳನ್ನು ಅಳವಡಿಸುವ ಮೊದಲು, ದಯವಿಟ್ಟು ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)