ಬೋಳು ಸಮಸ್ಯೆಯಿಂದ ಮುಕ್ತಿ ಪಡೆಯಲು 8 ಅತ್ಯುತ್ತಮ ಪರಿಹಾರ
ದೇಹದೊಂದಿಗೆ ಕೂದಲಿಗೂ ಸರಿಯಾದ ಪೋಷಣೆ ಅಗತ್ಯವಿರುತ್ತದೆ. ಇಲ್ಲದಿದ್ದಲ್ಲಿ, ಈ ಒತ್ತಡಭರಿತ ಜೀವನ ಶೈಲಿಯಲ್ಲಿ ಚಿಕ್ಕವಯಸ್ಸಿನಲ್ಲೇ ಕೂದಲು ಉದುರುವಿಕೆಯ ಸಮಸ್ಯೆ ಉಂಟಾಗುತ್ತದೆ. ಭವಿಷ್ಯದಲ್ಲಿ ಇದು ಬೋಳುತಲೆ ಸಮಸ್ಯೆಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ಇಲ್ಲಿದೆ 8 ಅತ್ಯುತ್ತಮ ಮನೆಮದ್ದು.
ಕಪ್ಪೆಳ್ಳನ್ನು ಪುಡಿ ಮಾಡಿ ಅದನ್ನು ನೀರಿನಲ್ಲಿ ಮಿಶ್ರಣ ಮಾಡಿ ಹೇರ್ ವಾಶ್ ಮಾಡಿದರೆ ಕೂದಲುದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ.
ಅರಳೆಣ್ಣೆಯನ್ನು ಬೋಳು ತಲೆ ಸಮಸ್ಯೆಗೆ ಅತ್ಯಂತ ಶಕ್ತಿಶಾಲಿ ಔಷಧಿಯೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ವಾರದಲ್ಲಿ ಒಂದು ಬಾರಿಯಾದರೂ ಅರಳೆಣ್ಣೆಯಿಂದ ತಲೆಗೆ ಮಸಾಜ್ ಮಾಡಿ ಸ್ನಾನ ಮಾಡಿ.
ಆಪಲ್ ಸೈಡರ್ ವಿನೆಗರ್ ವಿನೇಗರ್ ಅನ್ನು ನೀರು ಮತ್ತು ಶಾಂಪೂ ಜೊತೆ ಬೆರೆಸಿ ಹೇರ್ ವಶ್ ಮಾಡುವುದರಿಂದ ನೆತ್ತಿಯ ಪಿಎಚ್ ಸಮತೋಲನಗೊಂಡು ಕೂದಲ ಬೆಳವಣಿಗೆಗೆ ಸಹಕಾರಿ ಆಗಲಿದೆ.
ಈರುಳ್ಳಿ ರಸದಲ್ಲಿ ಕಂಡು ಬರುವ ಸಲ್ಫರ್ ಕೂದಲಿನ ಬೇರುಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗುವಂತೆ ಮಾಡುವುದರ ಜೊತೆಗೆ ಫಂಗಸ್ ಮತ್ತು ಬ್ಯಾಕ್ಟೀರಿಯಾದ ಸಮಸ್ಯೆಯಿಂದಲೂ ರಕ್ಷಿಸುತ್ತದೆ.
ನಿತ್ಯ ಸ್ವಲ್ಪ ಪ್ರಮಾಣದ ಅಲೋವೆರಾ ಜೆಲ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಶೀಘ್ರದಲ್ಲೆ ಬೋಳು ತಲೆ ಸಮಸ್ಯೆಗೆ ಪರಿಹಾರ ದೊರೆಯಲಿದೆ.
ಶುಂಠಿಯಲ್ಲಿರುವ ಬಯೋಆಕ್ಟಿವ್ ಸಂಯುಕ್ತವು ನೆತ್ತಿಯ ರಕ್ತಪರಿಚಲನೆಯನ್ನು ಉತ್ತೇಜಿಸಿ, ಕೂದಲಿನ ಕಿರುಚೀಲಗಳನ್ನು ನವೀಕರಿಸುತ್ತದೆ. ಶುಂಠಿ ರಸವನ್ನು, ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಮಸಾಜ್ ಮಾಡಿ, ಅರ್ಧಗಂಟೆ ನಂತರ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ಪರಿಹಾರ ಕೈಗೊಳ್ಳುವುದರಿಂದ ಬೋಳು ತಲೆ ಸಮಸ್ಯೆ ನಿವಾರಣೆಯಾಗುತ್ತದೆ.
ನಿಂಬೆ ರಸವನ್ನು ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಉದುರುವುದು, ತಲೆಹೊಟ್ಟು, ಒಣ ಕೂದಲು ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಮೊಟ್ಟೆಯ ಬಿಳಿ ಭಾಗವನ್ನು ಮಾಸ್ಕ್ ಆಗಿ ಬಳಸುವುದರಿಂದ ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕೂದಲನ್ನು ಹೊಳಪು, ಮೃದು ಮತ್ತು ದಪ್ಪವಾಗಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.