ಗ್ರೀನ್ ಟೀ ಅನ್ನು ಉತ್ತಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅದರಲ್ಲೂ ತೂಕ ಇಳಿಕೆ ಗ್ರೀನ್ ಟೀ ಅತ್ಯುತ್ತಮ ಪಾನೀಯವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಇದರ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರಕ ಎಂದು ನಿಮಗೆ ತಿಳಿದಿದೆಯೇ?

Yashaswini V
Apr 17,2023

ನರಮಂಡಲ

ಹಸಿರು ಚಹಾವು ಇತರ ಚಹಾಗಳಿಗಿಂತ ಕಡಿಮೆ ಕೆಫೀನ್ ಅನ್ನು ಹೊಂದಿರುತ್ತದೆಯಾದರೂ, ಅದು ಕೆಫೀನ್ ಅನ್ನು ಹೊಂದಿರುತ್ತದೆ. ಹಾಗಾಗಿ, ಇದರ ಅತಿಯಾದ ಸೇವನೆಯು ನಿಮ್ಮ ನರಮಂಡಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಉದರ ಆರೋಗ್ಯ

ಹೆಚ್ಚಾಗಿ ಗ್ರೀನ್ ಟೀ ಸೇವನೆ ಮತ್ತು ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವನೆ ಉದರದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ.

ಯಕೃತ್ತಿನಲ್ಲಿ ವಿಷತ್ವ

ಹಸಿರು ಚಹಾ, ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಹೊಟ್ಟೆ ಅಥವಾ ಯಕೃತ್ತಿನಲ್ಲಿ ವಿಷತ್ವವನ್ನು ಉಂಟುಮಾಡಬಹುದು ಎಂದು ಸಂಶೋಧನೆಯಿಂದ ಬಹಿರಂಗಗೊಂಡಿದೆ.

ಒತ್ತಡ ಹೆಚ್ಚಳ

ಹಿತ-ಮಿತವಾಗಿ ಗ್ರೀನ್ ಟೀ ಸೇವಿಸುವುದರಿಂದ ಸ್ಟ್ರೆಸ್ ರಿಲೀಫ್ ಆಗುತ್ತದೆ. ಆದರೆ, ಅತಿಯಾದ ಗ್ರೀನ್ ಟೀ ಸೇವನೆಯು ಒತ್ತಡ, ಆತಂಕವನ್ನು ಹೆಚ್ಚಿಸುವುದು ಮಾತ್ರವಲ್ಲ, ನಿದ್ರಾಹೀನತೆ ಸಮಸ್ಯೆಗೂ ಕಾರಂವಾಗಬಹುದು.

ರಕ್ತ ಹೀನತೆ

ಅತಿಯಾದ ಗ್ರೀನ್ ಟೀ ಸೇವನೆಯು ದೇಹವು ಆಹಾರದಿಂದ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ರಕ್ತ ಹೀನತೆ ಸಮಸ್ಯೆಗೂ ಕಾರಣವಾಗುತ್ತದೆ.

ತಲೆ ನೋವು

ಹೆಚ್ಚಿನವರಲ್ಲಿ ಅತಿಯಾದ ಗ್ರೀನ್ ಟೀ ಸೇವನೆಯು ತಲೆ ನೋವಿನ ಸಮಸ್ಯೆಗೂ ಕಾರಣವಾಗಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

VIEW ALL

Read Next Story