ಅತಿಯಾದ ತೂಕ ದೇಹವನ್ನು ರೋಗಗಳ ಉಗ್ರಾಣವನ್ನಾಗಿಸುತ್ತದೆ. ಆದರೆ, ತೂಕ ಇಳಿಕೆ ಒಂದು ದೊಡ್ಡ ಚಾಲೆಂಜಿಂಗ್ ವಿಷಯವಾಗಿದೆ.
ಬಲೂನ್ ರೀತಿ ಊದಿರುವ ಹೊಟ್ಟೆಯನ್ನೂ ಸುಲಭವಾಗಿ ಕರಗಿಸುವ ಶಕ್ತಿ ಕೆಲವು ಪಾನೀಯಗಳಲ್ಲಿದೆ. ಇವು ಕೆಲವೇ ದಿನಗಳಲ್ಲಿ ಡೊಳ್ಳು ಹೊಟ್ಟೆ ಕರಗಿಸಿ ಚಪ್ಪಟೆಯಾದ ಸ್ಲಿಮ್ ಬೆಲ್ಲಿಯನ್ನು ನಿಮ್ಮದಾಗಿಸುತ್ತದೆ.
ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಿರಿ.
ಚಿಯಾ ಸೀಡ್ಸ್ ಅನ್ನು ನಿಂಬೆಯೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಬೇಗ ಕರಗುತ್ತದೆ.
ಹಾಲು ಹಾಕದೇ ಶುಂಠಿ ಟೀ ತಯಾರಿಸಿ ಕುಡಿಯುವುದರಿಂದ ಚಯಾಪಚಯ ಹೆಚ್ಚಾಗಿ ಹೊಟ್ಟೆ ಕರಗಲು ಸುಲಭವಾಗುತ್ತದೆ.
ದಾಲ್ಚಿನ್ನಿ ನೀರು ಅಥವಾ ದಾಲ್ಚಿನ್ನಿಯಿಂದ ತಯಾರಿಸಿ ಹರ್ಬಲ್ ಟೀ ಸೇವನೆಯು ತೂಕ ಇಳಿಕೆಯನ್ನು ಪ್ರಚೋದಿಸುತ್ತದೆ.
ನಾರ್ಮಲ್ ಟೀ ಕುಡಿಯುವ ಬದಲಿಗೆ ಗ್ರೀನ್ ಟೀಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ಡೊಳ್ಳು ಹೊಟ್ಟೆ ಕೆಲವೇ ದಿನಗಳಲ್ಲಿ ಕರಗುತ್ತದೆ.
ನೀವು ಹರ್ಬಲ್ ಟೀ ಪ್ರಿಯರಾಗಿದ್ದರೆ ದಿನಕ್ಕೆ ಒಮ್ಮೆ ಪುದೀನಾ ಟೀ ತಯಾರಿಸಿ ಇದರಲ್ಲಿ ನಿಂಬೆ ರಸ ಬೆರೆಸಿ ಕುಡಿದರೆ ಕಠಿಣ ಕೊಬ್ಬು ಕೂಡ ಸುಲಭವಾಗಿ ಕರಗಿ ಕೆಲವೇ ದಿನಗಳಲ್ಲೇ ಚಪ್ಪಟೆಯಾದ ಹೊಟ್ಟೆ ನಿಮ್ಮದಾಗಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.