ಕುತ್ತಿಗೆ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ 5 ಅತ್ಯುತ್ತಮ ಮನೆಮದ್ದುಗಳು
ಸಾಮಾನ್ಯವಾಗಿ ನಾವು ಮುಖದ ಅಂದಕ್ಕೆ ಹೆಚ್ಚು ಗಮನ ಹರಿಸುತ್ತೇವೆ. ಆದರೆ, ಕತ್ತಿನ ಭಾಗಕ್ಕೆ ಅಷ್ಟಾಗಿ ಗಮನಕೊಡುವುದಿಲ್ಲ. ಹಾಗಾಗಿ, ಕುತ್ತಿಗೆ ಸುತ್ತ ಕಪ್ಪಾಗುತ್ತದೆ.
ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ನೀವು ಈ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು. ಅವುಗಳೆಂದರೆ...
ಹಾಲಿನ ಕೆನೆ ಉತ್ತಮ ಕ್ಲೆನ್ಸರ್ ಮತ್ತು ಟೋನರ್. ಇದನ್ನು ತೆಗೆದುಕೊಂಡು ಕುತ್ತಿಗೆ ಸುತ್ತ ಹಚ್ಚಿ ಲಘುವಾಗಿ ಮಸಾಜ್ ಮಾಡಿ.
ಬಟ್ಟಲಿನಲ್ಲಿ ಹಾಲನ್ನು ತೆಗೆದುಕೊಂಡು ಒಂದು ಮೃದುವಾದ ಬಟ್ಟೆಯಿಂದ ಅದನ್ನು ಕುತ್ತಿಗೆ ಸುತ್ತಲೂ ಹಚ್ಚಿ 15 ನಿಮಿಷಗಳ ನಂತರ ವಾಶ್ ಮಾಡಿ. ಇದರಿಂದ ಕಪ್ಪು ಕಲೆ ನಿವಾರಣೆಯಾಗುತ್ತದೆ.
ಆಲಿವ್ ಎಣ್ಣೆಯಲ್ಲಿ ಸಕ್ಕರೆಯನ್ನು ಬೆರೆಸಿ ಅದನ್ನು ಕುತ್ತಿಗೆ ಸುತ್ತಲೂ ಹಚ್ಚಿ ಲಘು ಮಸಾಜ್ ಮಾಡಿ.
ನಿಂಬೆ ರಸ ಅತ್ಯುತ್ತಮ ಬ್ಲೀಚಿಂಗ್ ಏಜೆಂಟ್ ಎಂಬುದು ನಿಮಗೆ ತಿಳಿದೇ ಇದೆ. ನಿಂಬೆ ರಸವನ್ನು ಕುತ್ತಿಗೆ ಸುತ್ತಲೂ ಅನ್ವಯಿಸಿ ಸ್ವಚ್ಛಗೊಳಿಸಿ.
ದಿನ ರಾತ್ರಿ ಮಲಗುವ ಮುನ್ನ ಅಲೋವೆರಾ ಜೆಲ್ ಅನ್ನು ಕುತ್ತಿಗೆ ಸುತ್ತಲೂ ಅನ್ವಯಿಸಿ. ಇದರಿಂದಲೂ ಕುತ್ತಿಗೆ ಸುತ್ತಲೂ ಮೂಡಿರುವ ಕಪ್ಪುಕಲೆಗಳು ನಿವಾರಣೆಯಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.