ಬ್ಲ್ಯಾಕ್ ಹೆಡ್ಸ್ ಸಮಸ್ಯೆಗೆ 5 ಪರಿಣಾಮಕಾರಿ ಮನೆಮದ್ದು
ಬದಲಾಗುತ್ತಿರುವ ವಾತಾವರಣದಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಬ್ಲ್ಯಾಕ್ ಹೆಡ್ಸ್ ಕೂಡ ಒಂದು.
ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್ ಗಳಿಗಿಂದ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ತುಂಬಾ ಪರಿಣಾಮಕಾರಿ ಆಗಿವೆ. ಅವುಗಳೆಂದರೆ...
ಟೂತ್‌ಪೇಸ್ಟ್‌ನ ತೆಳುವಾದ ಪದರವನ್ನು ಬ್ಲ್ಯಾಕ್ ಹೆಡ್ಸ್ ಪೀಡಿತ ಪ್ರದೇಶದಲ್ಲಿ ಮಾಸ್ಕ್ ರೀತಿ ಹಚ್ಚಿ 15-20 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ಬ್ಲ್ಯಾಕ್ ಹೆಡ್ಸ್ ಕ್ರಮೇಣ ಕಡಿಮೆ ಆಗುತ್ತದೆ.
ನಿಂಬೆರಸದಲ್ಲಿ ಸ್ವಲ್ಪ ಉಪ್ಪು ಬೆರೆಸಿ ಅದನ್ನು ಬ್ಲ್ಯಾಕ್ ಹೆಡ್ಸ್ ಪೀಡಿತ ಜಾಗದಲ್ಲಿ ಹಚ್ಚಿ 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಜೇನುತುಪ್ಪದಿಂದ ಲಘುವಾಗಿ ಮಸಾಜ್ ಮಾಡುವುದರಿಂದಲೂ ಬ್ಲ್ಯಾಕ್ ಹೆಡ್ಸ್ ಸಮಸ್ಯೆಗೆ ಸುಲಭ ಪರಿಹಾರ ದೊರೆಯುತ್ತದೆ.
ಆಲೂಗೆಡ್ಡೆ ಸಿಪ್ಪೆ ಸುಲಿದು ಅದನ್ನು ಚೆನ್ನಾಗಿ ರುಬ್ಬಿ ಬ್ಲ್ಯಾಕ್ ಹೆಡ್ಸ್ ಮೇಲೆ ಲೇಪಿಸಿ, ಅರ್ಧಗಂಟೆ ಬಳಿಕ ಮುಖ ತೊಳೆಯಿರಿ.
ಸ್ವಲ್ಪ ನೀರಿನಲ್ಲಿ ಚಿಟಿಕೆಯಷ್ಟು ಬೇಕಿಂಗ್ ಸೋಡಾ ಬೆರೆಸಿ ಅದರ ಪೇಸ್ಟ್ ತಯಾರಿಸಿ ಮುಖಕ್ಕೆ ಲೇಪಿಸಿ. 15 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ಬ್ಲ್ಯಾಕ್ ಹೆಡ್ಸ್ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ನಿವಾರಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.