ಕಡಿಮೆ ಎಣ್ಣೆಯಲ್ಲಿ ಉಬ್ಬಿ ಬರುವ ಪೂರಿ ಹೀಗೆ ಮಾಡಿ

Ranjitha R K
Jan 04,2024

ಕಡಿಮೆ ಎಣ್ಣೆಯಲ್ಲಿ ಪೂರಿ

ಅನೇಕ ಬಾರಿ, ಪೂರಿಗಳನ್ನು ಕರಿಯುವಾಗ, ಅವುಗಳಲ್ಲಿ ಬಹಳಷ್ಟು ಎಣ್ಣೆ ತುಂಬಿಕೊಳ್ಳುತ್ತದೆ. ಈ ಕಾರಣದಿಂದಾಗಿ ಹೆಚ್ಚಿನ ಜನ ಪೂರಿ ತಿನ್ನಲು ಹಿಂಜರಿಯುತ್ತಾರೆ. ಆದರೆ ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಕಡಿಮೆ ಎಣ್ಣೆಯಲ್ಲಿಯೇ ಉಬ್ಬಿ ಬರುವ ಪೂರಿ ತಯಾರಿಸಬಹುದು.

ಕಡಿಮೆ ಎಣ್ಣೆಯಲ್ಲಿ ಪೂರಿ

ಪೂರಿ ಉಬ್ಬಿ ಬರಬೇಕಾದರೆ ಹಿಟ್ಟನ್ನು ಸ್ವಲ್ಪ ಗಟ್ಟಿಯಾಗಿಯೇ ಕಲಸಿಕೊಳ್ಳಬೇಕು.

ಕಡಿಮೆ ಎಣ್ಣೆಯಲ್ಲಿ ಪೂರಿ

ಪೂರಿಗಾಗಿ ಹಿಟ್ಟು ಕಲಸುವಾಗ ಅದಕ್ಕೆ ತುಪ್ಪ ಸೇರಿಸಲೇಬೇಕು.

ಕಡಿಮೆ ಎಣ್ಣೆಯಲ್ಲಿ ಪೂರಿ

ಹಿಟ್ಟು ಕಲಸಿದ ಮೇಲೆ ಅದನ್ನು ಬಹಳ ಹೊತ್ತು ಇಡಬಾರದು.

ಕಡಿಮೆ ಎಣ್ಣೆಯಲ್ಲಿ ಪೂರಿ

ಎಣ್ಣೆ ಸರಿಯಾಗಿ ಬಿಸಿಯಾದಾಗದಿದ್ದಾಗ ಪೂರಿ ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಎಣ್ಣೆ ಸರಿಯಾಗಿ ಬಿಸಿಯಾದ ಮೇಲಷ್ಟೇ ಪೂರಿಯನ್ನು ಕರಿಯಲು ಹಾಕಬೇಕು.

ಕಡಿಮೆ ಎಣ್ಣೆಯಲ್ಲಿ ಪೂರಿ

ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಮರು ಬಳಕೆ ಮಾಡುತ್ತಿದ್ದರೆ ಪೂರಿ ತುಂಬಾ ಎಣ್ಣೆಯೇ ಇರುತ್ತದೆ.

ಕಡಿಮೆ ಎಣ್ಣೆಯಲ್ಲಿ ಪೂರಿ

ಪೂರಿ ಲಟ್ಟಿಸುವ ವೇಳೆ ಒಣ ಹಿಟ್ಟನ್ನು ಅದರ ಮೇಲೆ ಉದುರಿಸಲು ಹೋಗಬೇಡಿ.ಪೂರಿ ಉಬ್ಬಿ ಬರುವುದಿಲ್ಲ

ಕಡಿಮೆ ಎಣ್ಣೆಯಲ್ಲಿ ಪೂರಿ

ಪೂರಿ ಕರಿಯುವ ಎಣ್ಣೆಗೆ ಸ್ವಲ್ಪ ಉಪ್ಪು ಹಾಕಿ. ಹೀಗೆ ಮಾಡಿದಾಗ ಪೂರಿ ತನ್ನೊಳಗೆ ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ.

ಕಡಿಮೆ ಎಣ್ಣೆಯಲ್ಲಿ ಪೂರಿ

ಈ ಟಿಪ್ಸ್ ಮೂಲಕ ಕಡಿಮೆ ಎಣ್ಣೆಯಲ್ಲಿ ಉಬ್ಬಿ ಬರುವ ಪೂರಿಯನ್ನು ಮಾಡಬಹುದು.

VIEW ALL

Read Next Story