ಬಿಸಿಲು ಧೂಳು ಪ್ರದೂಷಣೆಗಳಿಂದ ಕೂದಲು ನಿರ್ಜೀವವಾಗುತ್ತವೆ. ಹೀಗಾದಾಗ ಕೂದಲು ಉದುರುವ ಸಮಸ್ಯೆ ಕಾಡುತ್ತದೆ.
ಕೂದಲು ಉದುರುವುದು, ನೆತ್ತಿಯಲ್ಲಿ ತುರಿಕೆ ಕಾಣಿಸಿಕೊಳ್ಳುವುದು , ಕೂದಲು ಒರಟಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಕೆಲವೊಂದು ವಿಧಾನಗಳನ್ನು ಅನುಸರಿಸಿದರೆ ಕೂದಲಿನ ಸಮಸ್ಯೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.
ಈ ಸಿಂಪಲ್ ಟ್ರಿಕ್ ಅನುಸರಿಸುವ ಮೂಲಕ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಕೂದಲು ಒದ್ದೆಯಾಗಿರುವಗಲೇ ಮನೆಯಿಂದ ಹೊರಗೆ ಹೋಗಬೇಡಿ. ಅಂದರೆ ತಲೆ ಸ್ನಾನ ಮಾಡಿದ ಕೂಡಲೇ ಮನೆಯಿಂದ ಹೊರ ಹೋಗಬೇಡಿ.
ಕೂದಲಿಗೆ ಹೆಚ್ಚು ಶಾಂಪೂ ಬಳಸಬೇಡಿ. ಕಂಡೀಶನರ್ ಬಳಸಿ.
ಹೇರ್ ಸ್ಪ, ಎಣ್ಣೆ, ಹೇರ್ ಮಾಸ್ಕ್ ಗಳನ್ನೂ ಬಳಸಿ.
ಕೂದಲನ್ನು ಡ್ರೈಯರ್ ಬಳಸುವ ಮೂಲಕ ಒಣಗಿಸಲು ಹೋಗಬೇಡಿ.
ತುಂಬಾ ಬಿಸಿ ನೀರನ್ನು ಬಳಸಿ ಕೂದಲಿಗೆ ಸ್ನಾನ ಮಾಡಬೇಡಿ.