ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬನ್ನು ಕರಗಿಸುವ ಸಲುವಾಗಿ ಜನರು ಡಯಟ್ ಮಾಡುವುದರ ಜೊತೆಗೆ ವ್ಯಾಯಾಮದ ಮೊರೆ ಹೋಗುತ್ತಾರೆ.
ಜೀರ್ಣಕ್ರಿಯೆಯ ಸಮಸ್ಯೆಯಿದ್ದರೂ ಹೊಟ್ಟೆಯ ಭಾಗದ ಕೊಬ್ಬು ಕರಗುವುದಿಲ್ಲ. ಜೀರ್ಣಕ್ರಿಯೆ ಸರಿಯಾಗಿ ಆದರೆ ಹೊಟ್ಟೆಯ ಕೊಬ್ಬು ಕೂಡಾ ಕರಗುತ್ತದೆ. ಹೀಗಾಗಿ ಜೀರ್ಣಕ್ರಿಯೆಯ ಮೇಲಿರಲಿ ನಿಮ್ಮ ಗಮನ.
ಡಿಪ್ರೆಶನ್ ನಲ್ಲಿದ್ದರೆ ಕೊಬ್ಬು ಕರಗುವುದಿಲ್ಲ. ಡಿಪ್ರೆಶನ್ ನಲ್ಲಿ ಕೋರ್ಟಿ ಸೋಲ್ ಲೆವೆಲ್ ಹೆಚ್ಚಾಗುತ್ತದೆ. ಇದರಿಂದ ಕೊಬ್ಬು ಬೇಗನೆ ಕರಗುವುದಿಲ್ಲ.
ಡಯಾಬಿಟಿಸ್ ಇದ್ದಾಗಲೂ ಹೊಟ್ಟೆಯ ಕೊಬ್ಬು ಬೇಗನೆ ಹೆಚ್ಚಾಗುತ್ತದೆ.
ಹೃದ್ರೋಗದ ಸಮಸ್ಯೆಯಲ್ಲಿಯೂ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಆರಂಭವಾಗುತ್ತದೆ. ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಸಮಸ್ಯೆ ಇದ್ದಾಗಲೂ ಹೊಟ್ಟೆಯ ಕೊಬ್ಬು ಕರಗುವುದಿಲ್ಲ.
ನಿದ್ರಾಹೀನತೆ ಕೊಡಾ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ.
ಹಾರ್ಮೋನ್ ಬದಲಾವಣೆಯಿಂದಲೂ ಹೊಟ್ಟೆಯ ಕೊಬ್ಬು ಕರಗುವುದಿಲ್ಲ.
ಗ್ರೀನ್ ಟೀ ಅಥವಾ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು. ಹೊಟ್ಟೆಯ ಕೊಬ್ಬಿನಿಂದ ಸಮಸ್ಯೆಗೊಳಗಾಗಿದ್ದರೆ ಇಂದೇ ಅವುಗಳನ್ನು ಅನುಸರಿಸಿ.
ಏನೇ ಮಾಡಿದರೂ ಹೊಟ್ಟೆಯ ಕೊಬ್ಬು ಕರಗುವುದಿಲ್ಲ ಎಂದಾದರೆ, ವೈದ್ಯರ ಬಳಿಗೆ ಭೇಟಿ ನೀಡಿ ಸಮಸ್ಯೆಗೆ ಸರಿಯಾದ ಪರಿಹಾರ ಕಂಡುಕೊಳ್ಳಿ