ತಲೆಗೆ ಸ್ನಾನ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ಕೂದಲು ಉದುರಲ್ಲ

ಕೂದಲಿನ ಆರೋಗ್ಯ

ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಿ ಕೂದಲು ಆರೋಗ್ಯಕರವಾಗಿ ಉದ್ದವಾಗಿ ಬೆಳೆಯಬೇಕು ಅಂದರೆ ಹೇರ್ ವಾಶ್ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಿ.

ಸಲ್ಫೆಟ್ ಮುಕ್ತ ಶಾಂಪೂ

ಕೂದಲು ಮತ್ತು ನೆತ್ತಿಯಲ್ಲಿನ ನೈಸರ್ಗಿಕ ತೈಲ ತೆಗೆದುಹಾಕದಂತೆ ತಡೆಯಲು ಸಲ್ಫೆಟ್ ಮುಕ್ತ ಶಾಂಪೂ ಬಳಸಿ ಹೇರ್ ವಾಶ್ ಮಾಡಿ.

ನಿತ್ಯ ತಲೆ ಸ್ನಾನ

ಪ್ರತಿನಿತ್ಯ ತಲೆಗೆ ಸ್ನಾನಮಾಡುವುದರಿಂದ ನೆತ್ತಿ ಒಣಗುತ್ತದೆ. ಇದರಿಂದ ನೆತ್ತಿಯ ನೈಸರ್ಗಿಕ ತೈಲ ನಾಶವಾಗಿ ಕೂದಲು ಹೆಚ್ಚಾಗಿ ಉದುರುತ್ತದೆ. ಇದನ್ನು ತಪ್ಪಿಸಲು ವಾರದಲ್ಲಿ 2-3 ಬಾರಿ ತಲೆಗೆ ಸ್ನಾನ ಮಾಡಿದರೆ ಅಷ್ಟೇ ಸಾಕು.

ಬಿಸಿ ನೀರಿನ ಬಳಕೆ

ತಲೆಗೆ ಸ್ನಾನ ಮಾಡುವಾಗ ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಸರಿಯಾಗಿ ಹೇರ್ ವಾಶ್

ತಲೆಗೆ ಸ್ನಾನ ಮಾಡುವಾಗ ಸಂಪೂರ್ಣವಾಗಿ ಕೂದಲನ್ನು ಸ್ವಚ್ಛಗೊಳಿಸದಿದ್ದರೆ ಶಾಂಪೂವಿನ ಕೆಮಿಕಲ್ಸ್ ಹಾಗೆ ಉಳಿದು ಕೂದಲನ್ನು ಹಾನಿಗೊಳಿಸಬಹುದು. ಇದು ಹೇರ್ ಫಾಲ್ ಗೆ ಪ್ರಮುಖ ಕಾರಣವೂ ಆಗಬಹುದು.

ಎಣ್ಣೆ ಹಾಕದಿರುವುದು

ಕೂದಲಿಗೆ ಎಣ್ಣೆ ಹಾಕದೇ ಹೇರ್ ವಾಶ್ ಮಾಡುವುದು ಕೂಡ ಕೂದಲು ಉದುರಲು ಕಾರಣವಾಗಿದೆ. ಇದನ್ನು ತಪ್ಪಿಸಲು ಸ್ನಾನ ಮಾಡುವ ಮೊದಲು ಕೂದಲಿಗೆ ಎಣ್ಣೆ ಹಾಕಿ.

ಮಸಾಜ್

ವಾರದಲ್ಲಿ ಒಮ್ಮೆಯಾದರೂ ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ ಬಳಿಕ ತಲೆಗೆ ಸ್ನಾನ ಮಾಡಿ. ಇದು ಕೂದಲಿನ ಕಿರುಚೀಲಗಾನ್ನು ಬಲಪಡಿಸುತ್ತದೆ.

ಅಲೋವೆರಾ

ಸ್ನಾನ ಮಾಡುವ ಮೊದಲು ತಾಜಾ ಅಲೋವೆರಾ ಜೆಲ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಸ್ವಲ್ಪಹೊತ್ತು ಬಿಟ್ಟು ಹೇರ್ ವಾಶ್ ಮಾಡಿ. ಇದು ಕೂದಲಿನ ಸರ್ವ ಸಮಸ್ಯೆಗೂ ಪರಿಹಾರ ನೀಡುತ್ತದೆ.

ಸೂಚನೆ

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.

VIEW ALL

Read Next Story