ಇತ್ತೀಚಿನ ದಿನಗಳಲ್ಲಿ ಡೆಂಗ್ಯು ಹಾವಳಿ ಹೆಚ್ಚಾಗುತ್ತಿದೆ. ಡೆಂಗ್ಯು ಇದ್ದಾಗ ಪ್ಲೇಟ್ಲೆಟ್ ಕೌಂಟ್ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವು ಆಹಾರಗಳ ಮೂಲಕ ಪ್ಲೇಟ್ಲೆಟ್ ಕೌಂಟ್ ಹೆಚ್ಚು ಮಾಡಬಹುದು.
ಹಾಲಿನಲ್ಲಿ ಪ್ರೋಟೀನ್ ಕ್ಯಾಲ್ಶಿಯಮ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪಾಲಕ್ ವಿಟಮಿನ್ ಕೆಯ ಅತ್ಯುತ್ತಮ ಮೂಲವಾಗಿದೆ. ಇದು ರಕ್ತಹೆಪ್ಪುಹತ್ತಲು ಸಹಾಯ ಮಾಡುತ್ತದೆ. ಪ್ಲೇಟ್ಲೆಟ್ ಕೌಂಟ್ ಹೆಚ್ಚಾಗಲು ಕೂಡಾ ನೆರವಾಗುತ್ತದೆ.
ಡೆಂಗ್ಯು ಜ್ವರ ಇರುವವರು ಪಪ್ಪಾಯ ಎಲೆಯ ರಸವನ್ನು ನಿತ್ಯ ಸೇವಿಸಿದರೆ ಪ್ಲೇಟ್ಲೆಟ್ ಕೌಂಟ್ ಹೆಚ್ಚಾಗುತ್ತದೆ.
ದಾಳಿಂಬೆಯಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ಇದು ರಕ್ತದ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಕುಂಬಳಕಾಯಿಯಲ್ಲಿರುವ ವಿಟಮಿನ್ ಎ ಮತ್ತು ಬೀಟಾ ಕ್ಯಾರೆಟಿನ್ ನಂಥ ಉತ್ಕರ್ಷಣ ನಿರೋಧಕಗಳು ಪ್ಲೇಟ್ಲೆಟ್ ಕೌಂಟ್ ಹೆಚ್ಚು ಮಾಡಲು ಸಹಾಯ ಮಾಡುತ್ತದೆ.
ಬೀಟ್ ರೂಟ್ ನಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಸಮೃದ್ದವಾಗಿದೆ. ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅವಶ್ಯಕ.
ಸಿಟ್ರೆಸ್ ಹಣ್ಣುಗಳಾದ ಕಿತ್ತಳೆ,ನಿಂಬೆ ಮತ್ತು ನೆಲ್ಲಿಕಾಯಿಯಲಿರುವ ವಿಟಮಿನ್ ಸಿ ಪ್ಲೇಟ್ಲೆಟ್ ಕೌಂಟ್ ಹೆಚ್ಚಿಸಲು ನೆರವಾಗುತ್ತದೆ. ಇದು ರಕ್ತದ ಪರಿಚಲನೆಯನ್ನು ವೇಗಗೊಳಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ