ಮಾಂಸವು ಸುಲಭವಾಗಿ ಜೀರ್ಣವಾಗುವ ಆಹಾರವಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಬೇಸಿಗೆಯಲ್ಲಿ ಮಾಂಸದ ಅತಿಯಾದ ಸೇವನೆಯು ತೂಕವನ್ನು ಹೆಚ್ಚಿಸುತ್ತದೆ.
ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರವನ್ನು ತಪ್ಪಿಸಲು ಸೂಚಿಸಲಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಇದು ಪಿತ್ತ ದೋಷವನ್ನು ಉಂಟುಮಾಡುತ್ತದೆ. ಇದಲ್ಲದೆ, ಮಸಾಲೆಯುಕ್ತ ಆಹಾರ ರುಚಿಕರ ಎಂದು ಹೆಚ್ಚಾಗಿ ಸೇವಿಸುವುದರಿಂದ ಅದು ತೂಕ ಹೆಚ್ಚಳದ ಅಪಾಯವನ್ನೂ ಹೆಚ್ಚಿಸುತ್ತದೆ.
ಬಾಳೆ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜೊತೆಗೆ ಇದು ದೇಹವನ್ನು ತಂಪು ಮಾಡುತ್ತದೆ. ಆದರೆ, ಬಾಳೆ ಹಣ್ಣಿನ ಸೇವನೆಯಿಂದ ತೂಕ ಹೆಚ್ಚಾಗುತ್ತದೆ. ನೀವು ತೂಕ ಇಳಿಸಲು ಬಯಸಿದರೆ ಅತಿಯಾಗಿ ಬಾಳೆ ಹಣ್ಣನ್ನು ಸೇವಿಸುವುದನ್ನು ತಪ್ಪಿಸಿ.
ಹಣ್ಣುಗಳ ರಾಜ ಮಾವಿನ ಹಣ್ಣಿನ ಹೆಸರು ಕೇಳಿದೊಡನೆಯೇ ಬಾಯಲ್ಲಿ ನೀರೂರುವುದು ಸಹಜ. ಆದರೆ, ಇದು ನಿಮ್ಮ ತೂಕವನ್ನೂ ಹೆಚ್ಚಿಸಬಹುದು.
ಸಂಪೂರ್ಣ ಆಹಾರ ಎಂದು ಪರಿಗಣಿಸಲ್ಪಟ್ಟಿರುವ ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಫುಲ್ ಕ್ರೀಮ್ ಹಾಲಿನ ಸೇವನೆಯಿಂದ ತೂಕವೂ ಹೆಚ್ಚಾಗುತ್ತದೆ.
ನಮ್ಮಲ್ಲಿ ಹಲವರಿಗೆ ಆಲೂಗಡ್ಡೆ ಎಂದರೆ ಬಲು ಪ್ರಿಯ. ಆದರೆ ಬೇಸಿಗೆಯಲ್ಲಿ ಆಲೂಗಡ್ಡೆ ಸೇವನೆಯು ನಿಮ್ಮ ತೂಕವನ್ನೂ ಹೆಚ್ಚಿಸಬಹುದು ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.