ಈ ಆಹಾರಗಳ ಸೇವನೆಯಿಂದ ಕರಿಮಣಿಯಂತೆ ಕಪ್ಪಾಗುತ್ತೆ ಬಿಳಿಕೂದಲು

Yashaswini V
Apr 05,2024

ಕಿತ್ತಳೆಹಣ್ಣು

ಕಿತ್ತಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು, ನಿಯಮಿತವಾಗಿ ಇದರ ಸೇವನೆಯಿಂದ ಅಕಾಲಿಕ ಬಿಳಿ ಕೂದಲನ್ನು ಕಪ್ಪಾಗಿಸಬಹುದು.

ನಿಂಬೆ ಹಣ್ಣು

ಕೂದಲ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ನಿಂಬೆಹಣ್ಣನ್ನು ನಿಮ್ಮ ದೈನಂದಿನ ಆಹಾರದಲ್ಲಿ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗಬಹುದು.

ಸಾಲ್ಮನ್ ಫಿಶ್

ಸಾಲ್ಮನ್ ಫಿಶ್ ಸೇವನೆಯು ಕೂದಲನ್ನು ಬಲವಾಗಿಸುವುದರ ಜೊತೆಗೆ ಸಾಲ್ಮನ್ ಮೀನಿನಲ್ಲಿರುವ ಎಣ್ಣೆಯೂ ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸಿಹಿ ಗೆಣಸು

ಬೀಟಾ ಕ್ಯಾರೋಟಿನ್ ಎಂಬ ಆ್ಯಂಟಿಆಕ್ಸಿಡೆಂಟ್‌ನಲ್ಲಿ ಸಮೃದ್ಧವಾಗಿರುವ ಸಿಹಿಗೆಣಸು ಕೂದಲನ್ನು ಕಪ್ಪಾಗಿಸುವುದಲ್ಲದೆ ಕೂದಲಿನ ಹೊಳಪನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿ.

ಗ್ರೀನ್ ಟೀ

ಗ್ರೀನ್ ಟೀ ಸೇವನೆಯು ದೇಹವನ್ನು ತಪ್ಪಾಗಿಸುವುದಲ್ಲದೆ ಇದು ನೆತ್ತಿಯ DHT ಮಟ್ಟವನ್ನು ಕಡಿಮೆ ಮಾಡುತ್ತದೆ. ನಿತ್ಯ ಒಂದೆರಡು ಕಪ್ ಗ್ರೀನ್ ಟೀ ಸೇವನೆಯು ಬಿಳಿ ಕೂದಲನ್ನು ಕಪ್ಪಾಗಿಸಬಹುದು.

ಪಾಲಕ್

ಫೋಲೇಟ್, ಕಬ್ಬಿಣ ಮತ್ತು ವಿಟಮಿನ್ ಎ ಮತ್ತು ಸಿ ನಂತಹ ಪ್ರಯೋಜನಕಾರಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಪಾಲಕ್ ಸೊಪ್ಪು ಮೇದೋಗ್ರಂಥಿಗಳ ಸ್ರಾವವನ್ನು ಉತ್ಪಾದಿಸಲು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ನಿಯಮಿತವಾಗಿ ಇದರ ಬಳಕೆಯು ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ ಎನ್ನಲಾಗುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story