ಪಿರಿಯೆಡ್ಸ್ ಸಮಯದಲ್ಲಿ ಹೆಣ್ಣು ಮಕ್ಕಳು ಕೆಲವು ಹಣ್ಣುಗಳನ್ನು ಸೇವಿಸಿದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಮೋಸಂಬಿ ಹಣ್ಣು ಹುಳಿ ಅಂಶವನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಆಸಿಡಿಕ್ ನೇಚರ್ ಹೆಚ್ಚುತ್ತದೆ. ಹಾಗಾಗಿ ಹೊಟ್ಟೆ ನೋವಿನ ಸಮಸ್ಯೆ ಕಾಡಬಹುದು.
ಕಿತ್ತಳೆಯಲ್ಲಿ ಪೋಷಕ ತತ್ವ ಭರಪೂರವಾಗಿರುತ್ತದೆ. ಆದರೆ ಇದನ್ನು ಪಿರಿಯೆಡ್ಸ್ ಸಮಯದಲ್ಲಿ ಸೇವಿಸಿದರೆ ಪಿರಿಯೆಡ್ಸ್ ನೋವು ಇನ್ನೂ ಹೆಚ್ಚಾಗಬಹುದು.
ಪಿರಿಯೆಡ್ಸ್ ಸಮಯದಲ್ಲಿ ನಿಂಬೆ ಹಣ್ಣನ್ನು ಸೇವಿಸಿದರೆ ಪಿರಿಯೆಡ್ಸ್ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವು ಜಾಸ್ತಿಯಾಗುತ್ತದೆ.
ಪಿರಿಯೆಡ್ಸ್ ಸಮಯದಲ್ಲಿ ಹುಳಿ ದ್ರಾಕ್ಷಿ ಕೂಡಾ ತಿನ್ನಬಾರದು. ಇದು ಕೂಡಾ ಪಿರಿಯೆಡ್ಸ್ ನೋವನ್ನು ಹೆಚ್ಚು ಮಾಡುತ್ತದೆ.
ಕಿವಿ ಹಣ್ಣು ಕೂಡಾ ರುಚಿಯಲ್ಲಿ ಬಹಳ ಹುಳಿ. ಹಾಗಾಗಿ ಪಿರಿಯೆಡ್ಸ್ ವೇಳೆ ಈ ಹಣ್ಣನ್ನು ಕೂಡಾ ತಿನ್ನಬಾರದು.
ಪಿರಿಯೆಡ್ಸ್ ವೇಳೆ ಬಾಳೆಹಣ್ಣು ಕೂಡಾ ಸೇವಿಸುವಂತಿಲ್ಲ . ಇದು ಕೂಡಾ ಮುಟ್ಟಿನ ಸಂದರ್ಭದ ಹೊಟ್ಟೆನೋವಿಗೆ ಕಾರಣವಾಗಬಹುದು.
ಇನ್ನು ಕಾಫೀ, ಟೀ ಮುಂತಾದ ಪಾನೀಯಗಳಿಂದಲೂ ಈ ವೇಳೆ ದೂರ ಇರಬೇಕು.
ನೀವು ಕೂಡಾ ನಿಮ್ಮ ಮುಟ್ಟಿನ ವೇಳೆ ಈ ಹಣ್ಣುಗಳನ್ನು ಸೇವಿಸುತ್ತಿದ್ದರೆ ಆ ಅಭ್ಯಾಸ ಬಿಟ್ಟು ಬಿಡಿ. ಇದು ಮುಟ್ಟಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಕಾಡುವ ನೋವನ್ನು ಮತ್ತಷ್ಟು ಹೆಚ್ಚಿಸಬಹುದು.