ಕಡಲೆಹಿಟ್ಟನ್ನು ಕೇವಲ ಅಡುಗೆ ಮಾಡಲು ಮಾತ್ರವಲ್ಲ, ತ್ವಚೆಯ ಸಮಸ್ಯೆಗಳ ನಿವಾರಣೆಗೆ ಕೂಡಾ ಬಳಸಲಾಗುತ್ತದೆ. ಹಾಗಿದ್ದರೆ ಕಡಲೆಹಿಟ್ಟಿನ ಹ್ಯಾಕ್ಸ್ ನೋಡೋಣ.
ಕಡಲೆ ಹಿಟ್ಟು ತ್ವಚೆಯ ಮೂರು ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ. ಇದು ಬ್ಲಾಕ್ ಹೆಡ್ ಸಮಸ್ಯೆ, ಆಯಿಲಿ ಫೇಸ್ ಸಮಸ್ಯೆ , ಮತ್ತು ಕಾಂತಿ ಹೀನ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಕಡಲೆ ಹಿಟ್ಟು ಮತ್ತು ಆಲೋವಿರಾ ಟ್ಯಾನಿಂಗ್ ಮತ್ತು ಸನ್ ಬರ್ನ್ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಒಂದು ಚಮಚ ಕಡಲೆ ಹಿಟ್ಟಿಗೆ ಒಂದು ಚಮಚ ಆಲೋವಿರಾ ಜೆಲ್ ಬೆರೆಸಿ ಮುಖಕ್ಕೆ ಹಚ್ಚಿ. ಒಳಗುವವರೆಗೆ ಹಾಗೆಯೇ ಬಿಡಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ ಮೂರು ದಿನ ಈ ರೀತಿ ಮಾಡಿದರೆ ಪರಿಣಾಮ ಕಾಣಿಸುತ್ತದೆ.
ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಸಮಸ್ಯೆಗೆ ಕಡಲೆ ಹಿಟ್ಟಿಗೆ ಪಪ್ಪಾಯ ಸೇರಿಸಿ ಮುಖಕ್ಕೆ ಹಚ್ಚಿ.
ನಾಲ್ಕರಿಂದ ಐದು ತುಂಡು ಪಪ್ಪಾಯವನ್ನು ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ರೋಸ್ ವಾಟರ್ ನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.
ಒಂದು ಚಮಚ ಮುಲ್ತಾನಿ ಮಿಟ್ಟಿ, ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ರೋಸ್ ವಾಟರ್ ನೊಂದಿಗೆ ಬೆರೆಸಿ ಇದನ್ನು ಮುಖಕ್ಕೆ ಹಚ್ಚಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಆಯಿಲಿ ಫೇಸ್ ಸಮಸ್ಯೆ ನಿವಾರಣೆಯಾಗುತ್ತದೆ.
ಯಾವುದೇ ಫೇಸ್ ಪ್ಯಾಕ್ ಹಾಕಿದರೂ ನಂತರ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ.