ಬ್ಯೂಟಿಫುಲ್ ಸ್ಕಿನ್ ಪಡೆಯಲು ಬಲು ಉಪಯೋಗಿ ಕಡಲೆಹಿಟ್ಟು

Yashaswini V
Nov 03,2023

ಕಡಲೆಹಿಟ್ಟು

ಪ್ರತಿಯೊಬ್ಬರ ಮನೆಯಲ್ಲೂ ಕಡಲೆಹಿಟ್ಟು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ.

ಸೌಂದರ್ಯದ ಗಣಿ

ಪ್ರಾಚೀನ ಕಾಲದಿಂದಲೂ ಮಹಿಳೆಯರು ತಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಕಡಲೆ ಹಿಟ್ಟನ್ನು ಬಳಸುತ್ತಾರೆ.

ಫೇಸ್ ವಾಶ್

ಕಡಲೆ ಹಿಟ್ಟಿನಲ್ಲಿ ಮುಖ ತೊಳೆಯುವುದರಿಂದ, ಅದರ ಪ್ಯಾಕ್ ಅನ್ನು ಬಳಸುವುದರಿಂದ ಮೊಡವೆ, ಶುಷ್ಕತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಇದರ ಪ್ರಯೋಜನಗಳೆಂದರೆ...

ಮೊಡವೆ

ಮುಖದಲ್ಲಿನ ಮೊಡವೆ ನಿವಾರಣೆಗೆ ಕಡಲೆಹಿಟ್ಟು ಪ್ರಯೋಜನಕಾರಿ. ನಿತ್ಯ ಕಡಲೆಹಿಟ್ಟಿನಿಂದ ಮುಖ ತೊಳೆಯುವುದರಿಂದ ಮೊಡವೆ ನಿವಾರಣೆ ಆಗುತ್ತದೆ.

ಆಯಿಲ್ ಸ್ಕಿನ್

ಆಯಿಲ್ ಸ್ಕಿನ್ ಸಮಸ್ಯೆ ಇರುವವರು ಕಡಲೆಹಿಟ್ಟಿನಲ್ಲಿ ಮೊಸರು ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ.

ತ್ವಚೆಯ ರಂಧ್ರಗಳು

ನೀವು ತ್ವಚೆಯಲ್ಲಿ ರಂಧ್ರಗಳನ್ನು ಹೊಂದಿದ್ದರೆ ಕಡಲೆಹಿಟ್ಟಿನಲ್ಲಿ ಸೌತೆಕಾಯಿ ರಸವನ್ನು ಮಿಕ್ಸ್ ಮಾಡಿ, ಫೇಸ್ ಪ್ಯಾಕ್ ಆಗಿ ಬಳಸಿ. ಇದು ಡ್ರೈ ಆದ ನಂತರ ಫೇಸ್ ವಾಶ್ ಮಾಡಿ.

ಟ್ಯಾನಿಂಗ್

ಕಡಲೆ ಹಿಟ್ಟಿನಲ್ಲಿ 4 ಬಾದಾಮಿ ಪುಡಿ, 1 ಚಮಚ ಹಾಲು, 1 ಚಮಚ ನಿಂಬೆರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ. ಅರ್ಧಗಂಟೆ ಬಳಿಕ ಫೇಸ್ ವಾಶ್ ಮಾಡುವುದರಿಂದ ಟ್ಯಾನ್ ರಿಮೂವ್ ಮಾಡಬಹುದು.

ಶುಷ್ಕತೆ

ಕಡಲೆಹಿಟ್ಟಿನಲ್ಲಿ ಕೆನೆ ಅಥವಾ ಹಾಲು, ಅರಿಶಿನ ಮತ್ತು ಜೇನುತುಪ್ಪವನ್ನು ಬೆರೆಸಿ ಇದನ್ನು ಮುಖಕ್ಕೆ ಹಚ್ಚಿ 15ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಫೇಸ್ ವಾಶ್ ಮಾಡಿ. ಇದು ತ್ವಚೆಗೆ ನೈಸರ್ಗಿಕ ತೇವಾಂಶ ಮತ್ತು ಹೊಳಪನ್ನು ನೀಡುತ್ತದೆ.

ಕಪ್ಪು ಕಲೆ

ಕಡಲೆಹಿಟ್ಟಿನಲ್ಲಿ ಹಾಲು, ಅರಿಶಿನ ಬೆರೆಸಿ ಕಪ್ಪು ಕಲೆಯಿರುವ ಜಾಗದಲ್ಲಿ ಲೇಪಿಸಿ. ಅದು ಡ್ರೈ ಆದ ಬಳಿಕ ಸ್ವಚ್ಛಗೊಳಿಸಿ. ಈ ರೀತಿ ಮಾಡುವುದರಿಂದ ಕಪ್ಪು ಕೀಯಳೆ ನಿವಾರಣೆಯಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story