ಗ್ಲೋಯಿಂಗ್ ಸ್ಕಿನ್‌ಗಾಗಿ ತುಂಬಾ ಲಾಭದಾಯಕ ಪೇರಲ ಎಲೆಗಳು

Yashaswini V
Jul 11,2024

ಪೇರಲ

ತಿನ್ನಲು ಬಲು ರುಚಿಕರವಾದ ಪೇರಲ/ಸೀಬೆಹಣ್ಣಿನ ಎಲೆಗಳಲ್ಲಿಯೂ ಉತ್ತಮ ಜೀವಸತ್ವಗಳು, ಖನಿಜಗಳು ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತದೆ.

ಪೇರಲ ಎಲೆಗಳು

ಪೇರಲ ಎಲೆಗಳನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರಿನಲ್ಲಿ ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಇವು ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿ ಆಗಿದೆ.

ಮೊಡವೆ

ಪೇರಲ ಎಲೆಗಳ ಮಾಸ್ಕ್ ಮೊಡವೆ, ಮತ್ತದರಿಂದ ಮೂಡುವ ಕಲೆಗಳಿಂದ ಪರಿಹಾರವನ್ನು ನೀಡುತ್ತದೆ.

ಬ್ಲ್ಯಾಕ್‌ಹೆಡ್ಸ್

ಮುಖದಲ್ಲಿ ಮೂಡುವ ಬ್ಲ್ಯಾಕ್‌ಹೆಡ್ಸ್ ಸಮಸ್ಯೆಗೂ ಕೂಡ ಪೇರಲ ಎಲೆ ಮಾಸ್ಕ್ ರಾಮಬಾಣವಿದ್ದಂತೆ. ಇದಕ್ಕಾಗಿ, ಮುಖಕ್ಕೆ ಮಾಸ್ಕ್ ಹಚ್ಚಿ ಲಘು ಮಸಾಜ್ ಮಾಡಿ.

ಆಂಟಿ ಎಜಿಂಗ್

ಪೇರಲ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದು ಸ್ವಲ್ಪ ತಣ್ಣಗಾದ ಬಳಿಕ ಹತ್ತಿ ಉಂಡೆಯ ಸಹಾಯದಿಂದ ಆ ರಸವನ್ನು ಮುಖಕ್ಕೆ ಹಚ್ಚಿದರೆ ಇದು ಉತ್ತಮ ಆಂಟಿ ಏಜಿಂಗ್ ಆಗಿ ಕಾರ್ಯನಿರ್ವಹಿಸುತ್ತದೆ.

ಸ್ಕಿನ್ ಟೋನರ್

ಪೇರಲ ಎಲೆಗಳ ಕಷಾಯದಿಂದ ನಮ್ಮ ಮುಖವನ್ನು ತೊಳೆಯುವುದರಿಂದ ಇದು ಚರ್ಮದಲ್ಲಿ ಮೊಡವೆ, ಕಲೆಗಳನ್ನು ನಿವಾರಿಸುವ ಅತ್ಯುತ್ತಮ ಸ್ಕಿನ್ ಟೋನರ್ ಆಗಿ ಕೆಲಸ ಮಾಡುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story