ಕಪ್ಪು, ದಪ್ಪ & ಉದ್ಧ ಕೂದಲು

ನಿಮ್ಮ ಪ್ರತಿದಿನದ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ತೆಳ್ಳನೆಯ ಕೂದಲು ಕೂಡ ಕಪ್ಪು, ದಪ್ಪ ಮತ್ತು ಉದ್ಧವಾಗುತ್ತವೆ.

Puttaraj K Alur
Sep 07,2024

ಸರಳ ಸಲಹೆಗಳು

ನಿಮ್ಮ ಕೂದಲು ತೆಳ್ಳಗೆ ಮತ್ತು ಉದುರುತ್ತಿದ್ದರೆ, ಇಂದು ನಾವು ನಿಮಗೆ ಕೆಲವು ಸರಳ ಸಲಹೆಗಳನ್ನು ತಿಳಿಸಿಕೊಡಲಿದ್ದೇವೆ.

ಹಣ್ಣು & ತರಕಾರಿ

ಕೂದಲಿಗೆ ಸರಿಯಾದ ಪೋಷಣೆ ಮುಖ್ಯವಾಗಿದೆ. ಹಣ್ಣುಗಳು, ತರಕಾರಿಗಳು ಮತ್ತು ಬೀಜಗಳಂತಹ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

ಮೊಟ್ಟೆ, ಮೀನು & ಕಾಳು

ಕೂದಲಿನ ಬೆಳವಣಿಗೆಗೆ ಪ್ರೋಟೀನ್‌ ಅಗತ್ಯ. ನಿಮ್ಮ ಆಹಾರದಲ್ಲಿ ಮೊಟ್ಟೆ, ಮೀನು ಮತ್ತು ಕಾಳುಗಳನ್ನು ಸೇರಿಸಿಕೊಳ್ಳಬೇಕು.

8-10 ಗ್ಲಾಸ್‌ ನೀರು

ನೀರು ಕುಡಿಯುವುದು ಬಳಹ ಮುಖ್ಯ. ಪ್ರತಿದಿನ 8-10 ಗ್ಲಾಸ್‌ ನೀರು ಕುಡಿಯಿರಿ. ಇದು ನಿಮ್ಮ ಕೂದಲನ್ನು ಹೈಡ್ರೀಕರಿಸುತ್ತದೆ.

ಸ್ಟ್ರೈಟ್‌ನರ್‌

ಬ್ಲೋ ಡ್ರೈಯರ್‌ಗಳು ಮತ್ತು ಸ್ಟ್ರೈಟ್‌ನರ್‌ಗಳಂತಹ ಹೀಟ್‌ ಸ್ಟೈಲಿಂಗ್‌ ಬಳಕೆಯನ್ನು ಕಡಿಮೆ ಮಾಡಿ. ಇವು ಕೂದಲಿಗೆ ಹಾನಿಯನ್ನುಂಟು ಮಾಡುತ್ತವೆ.

ಮಸಾಜ್‌ ಮಾಡಿ

ವಾರಕೊಮ್ಮೆ ತೆಂಗಿನ ಎಣ್ಣೆ ಅಥವಾ ಆಲಿವ್‌ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್‌ ಮಾಡಿ. ಇದು ಕೂದಲಿಗೆ ಶಕ್ತಿ ಮತ್ತು ಪೋಷಣೆಯನ್ನು ನೀಡುತ್ತದೆ.

ಕೂದಲ ಟ್ರಿಮ್‌

ನಿಯಮಿತವಾಗಿ ಕೂದಲನ್ನು ಟ್ರಿಮ್‌ ಮಾಡುವುದು ಮುಖ್ಯ. ಇದು ಒಡೆದ ತುದಿಗಳನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಆರೋಗ್ಯಕರವಾಗಿ ಕಾಣುತ್ತದೆ.

ಸೌಮ್ಯ ಶಾಂಪೂ ಬಳಸಿ

ಸಲ್ಫೇಟ್‌ ಮುಕ್ತ ಮತ್ತು ಸೌಮ್ಯವಾದ ಶಾಂಪೂ ಬಳಸಿರಿ. ಪ್ರತಿದಿನ ಕೂದಲು ತೊಳೆಯುವುದನ್ನು ತಪ್ಪಿಸಿರಿ. ವಾರಕ್ಕೆ 2-3 ಬಾರಿ ಮಾತ್ರ ಶಾಂಪೂ ಮಾಡಿರಿ.

ಬಿಗಿಯಾದ ಕೇಶವಿನ್ಯಾಸ

ಬಿಗಿಯಾದ ಕೇಶವಿನ್ಯಾಸ ಮತ್ತು ತುರುಬು ಹಾಕಿಕೊಳ್ಳುವುದನ್ನು ತಪ್ಪಿಸಿ. ಈ ರೀತಿ ಮಾಡುವುದರಿಂದ ಕೂದಲಿಗೆ ಹಾನಿಯುಂಟಾಗಬಹುದು.

VIEW ALL

Read Next Story