ಬಿಳಿ ಕೂದಲ ಸಮಸ್ಯೆ

ವಿವಿಧ ರೀತಿಯ ಸೋಪ್, ಶ್ಯಾಂಪೂ, ಕಂಡಿಷನರ್ಗಳ ಬಳಕೆಯಿಂದ ಸಣ್ಣ ವಯಸ್ಸಿನಲ್ಲಿಯೂ ಕೂದಲು ಬೆಳ್ಳಗಾಗುವುದು ಇದೀಗ ಸಾಮಾನ್ಯ ಸಮಸ್ಯೆಯಾಗಿದೆ.

Puttaraj K Alur
Jan 10,2023

ಪವರ್ಫುಲ್ ಮನೆಮದ್ದುಗಳು

ಇದನ್ನು ನಿಯಂತ್ರಿಸಲು ಮನೆಯಲ್ಲೇ ಕೆಲವೊಂದು ಮದ್ದುಗಳನ್ನು ತಯಾರಿಸಿ ಉಪಯೋಗಿಸುವುದು ಉತ್ತಮ. ಕೆಲವು ಉಪಯುಕ್ತ ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಕರಿಬೇವಿನ ಎಲೆ & ತೆಂಗಿನ ಎಣ್ಣೆ

ಅರ್ಧ ಕಪ್ ಹಸಿ ಕರಿಬೇವಿನ ಎಲೆ, ಅರ್ಧ ಕಪ್ ಶುದ್ಧ ತೆಂಗಿನ ಎಣ್ಣೆ ತೆಗೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಕುದಿಸಬೇಕು. ನಂತರ ಕೂದಲಿನ ಬೇರುಗಳಿಗೆ ಈ ಮಿಶ್ರಣವನ್ನು ಹಚ್ಚಿ ಮಸಾಜ್ ಮಾಡಬೇಕು.

ಕನಿಷ್ಠ 2 ಬಾರಿ ಬಳಸಬೇಕು

ತಲೆ ಕೂದಲಿನ ಬೇರುಗಳಿಗೆ ಈ ಎಣ್ಣೆ ತಲುಪಬೇಕು. ಅರ್ಧ ಗಂಟೆ ನಂತರ ಚೆನ್ನಾಗಿ ಕೂದಲನ್ನು ತೊಳೆದುಕೊಳ್ಳಬೇಕು. ಇದನ್ನು ವಾರದಲ್ಲಿ ಕನಿಷ್ಠ 2 ಬಾರಿ ಮಾಡುತ್ತಾ ಇದ್ದರೆ ಕ್ರಮೇಣ ಕೂದಲು ಉದುರುವಿಕೆ, ಬೆಳ್ಳಗಾಗುವ ಸಮಸ್ಯೆ ನಿಯಂತ್ರಣಕ್ಕೆ ಬರುವುದು.

ತೆಂಗಿನ ಎಣ್ಣೆ & ನೆಲ್ಲಿಕಾಯಿ

ತೆಂಗಿನ ಎಣ್ಣೆಯಲ್ಲಿ ಸಣ್ಣದಾಗಿ ಪೀಸ್ ಮಾಡಿ ಒಣಗಿಸಿದ ನೆಲ್ಲಿಕಾಯಿ ಹಾಕಿ ಸ್ವಲ್ಪ ಹೊತ್ತು ಕುದಿಸಿ ತಣ್ಣಗಾದ ನಂತರ ತಲೆ ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿನ ಉತ್ತಮ ಬೆಳವಣಿಗೆ ಆಗುವುದು.

ಕರಿಬೇವಿನ ಎಲೆ & ಮಜ್ಜಿಗೆ

ತಲೆ ಕೂದಲಿನ ಆರೋಗ್ಯಕ್ಕೆ ಕರಿಬೇವಿನ ಎಲೆ ಮತ್ತು ಒಂದು ಕಪ್ ಮಜ್ಜಿಗೆ ಮಿಕ್ಸ್ ಮಾಡಿ ನೆತ್ತಿಯ ಭಾಗಕ್ಕೆ ಅನ್ವಯಿಸಿ ಮಸಾಜ್ ಮಾಡಬೇಕು. ಇದನ್ನು 30 ನಿಮಿಷ ಕಾಲ ಹಾಗೆ ಬಿಟ್ಟು ನಂತರ ತಲೆ ತೊಳೆದುಕೊಳ್ಳಬೇಕು.

ಕ್ಯಾರೆಟ್ ಸೀಡ್ ಆಯಿಲ್ & ಎಳ್ಳೆಣ್ಣೆ

ಕ್ಯಾರೆಟ್ ಸೀಡ್ ಆಯಿಲ್ ಮತ್ತು ಎಳ್ಳೆಣ್ಣೆ ಮಿಶ್ರಣ ಅದ್ಭುತ ಮತ್ತು ಪರಿಣಾಮಕಾರಿ ಕೆಲಸ ಮಾಡುತ್ತದೆ. ಅರ್ಧ ಚಮಚ ಕ್ಯಾರೆಟ್ ಬೀಜಗಳ ಎಣ್ಣೆಗೆ 4 ಚಮಚ ಎಳ್ಳೆಣ್ಣೆ ಮಿಶ್ರಣ ಮಾಡಿ ತಲೆ ಕೂದಲಿನ ಬೇರುಗಳಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಶಾಂಪು ಹಾಕಿ ತಲೆ ತೊಳೆದುಕೊಳ್ಳಿ

ಶುಂಠಿ ರಸ

ಶುಂಠಿ ಅದ್ಭುತ ಔಷಧೀಯ ಗುಣ ಒಳಗೊಂಡಿದೆ. ಇದರ ಬಳಕೆಯಿಂದ ಕೂದಲ ಸುಲಭವಾಗಿ ಸಮಸ್ಯೆ ಬಗೆಹರಿಸಬಹುದು. ಶುಂಠಿಗೆ ಜೇನುತುಪ್ಪ ಮಿಕ್ಸ್ ಮಾಡಿ ಬಳಸಬೇಕು.

VIEW ALL

Read Next Story