ತುಳಸಿಯನ್ನು ಹೀಗೆ ಬಳಸಿದರೆ ದಷ್ಟಪುಷ್ಟವಾಗಿ ಬೆಳೆಯುತ್ತೆ ಕೂದಲು!

Bhavishya Shetty
Apr 28,2024

ತುಳಸಿ

ಆಯುರ್ವೇದದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಹಲವು ಅಂಶಗಳಿವೆ. ಈ ವಸ್ತುಗಳನ್ನು ಬಳಸುವುದರಿಂದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ನಿವಾರಿಸಿಕೊಳ್ಳಬಹುದು.

ಆಯುರ್ವೇದ ಗಿಡಮೂಲಿಕೆ

ತುಳಸಿ ಆಯುರ್ವೇದ ಗಿಡಮೂಲಿಕೆಗಳ ಪ್ರಮುಖ ಭಾಗವಾಗಿದೆ. ಇದರ ಎಲೆಗಳನ್ನು ಬಳಸಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ತುಳಸಿ-ಜೇನುತುಪ್ಪ

ತುಳಸಿಯಲ್ಲಿರುವ ಗುಣಗಳು ಕೂದಲಿಗೆ ತುಂಬಾ ಪ್ರಯೋಜನಕಾರಿ. 10-12 ತುಳಸಿ ಎಲೆಗಳನ್ನು ತೊಳೆದು ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಈ ಪೇಸ್ಟ್ಗೆ ಸ್ವಲ್ಪ ನೀರು ಸೇರಿಸಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಈ ಪ್ಯಾಕ್ ಅನ್ನು ಕೂದಲಿಗೆ 20 ನಿಮಿಷಗಳ ಕಾಲ ಹಚ್ಚಿ. ನಂತರ ತೊಳೆಯಿರಿ.

ತುಳಸಿ ಮತ್ತು ತೆಂಗಿನ ಹಾಲು:

ಈ ಹೇರ್ ಪ್ಯಾಕ್ ಮಾಡಲು, ತುಳಸಿ ಪೇಸ್ಟ್ ಮಾಡಿ. ಈಗ ತೆಂಗಿನ ಹಾಲಿನಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕುದಿಸಿ, ತಣ್ಣಗಾದಾಗ, ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ತೊಳೆಯಿರಿ.

ತುಳಸಿ ಮತ್ತು ತೆಂಗಿನ ಎಣ್ಣೆ:

ಕೂದಲು ಉದುರುವಿಕೆಯನ್ನು ನಿಯಂತ್ರಿಸುವಲ್ಲಿ ಈ ಪ್ಯಾಕ್ ತುಂಬಾ ಸಹಾಯಕ. ಈ ಪ್ಯಾಕ್ ಮಾಡಲು, ತುಳಸಿ ಎಲೆಗಳನ್ನು ತೊಳೆದು ಒಣಗಿಸಿ. ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು, ಅದರಲ್ಲಿ ಆಮ್ಲಾ ಪುಡಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ. ಚೆನ್ನಾಗಿ ಕುದಿಸಿ. ಈ ಎಣ್ಣೆಯು ತಣ್ಣಗಾದಾಗ, ಅದನ್ನು ಶುದ್ಧವಾದ ಪಾತ್ರೆಯಲ್ಲಿ ಸಂಗ್ರಹಿಸಿ. ಈ ಎಣ್ಣೆಯಿಂದ ನಿಮ್ಮ ಕೂದಲಿಗೆ ಪ್ರತಿದಿನ ಮಸಾಜ್ ಮಾಡಬಹುದು.

ತಲೆಹೊಟ್ಟು ಸಮಸ್ಯೆ

ತುಳಸಿಯು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ನೆತ್ತಿಯನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ. ತುಳಸಿಯನ್ನು ಬಳಸುವುದರಿಂದ ಕೂದಲು ವೇಗವಾಗಿ ಬೆಳೆಯುತ್ತದೆ. ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುವಲ್ಲಿಯೂ ಪರಿಣಾಮಕಾರಿ.

ಸೂಚನೆ:

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story