ಕ್ಯಾಲೋರಿಗಳು, ವಿಟಮಿನ್ ಸಿ, ಕಾರ್ಬೋಹೈಡ್ರೇಟ್‌ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಇವೆ.
ಅಪಾರ ಪ್ರಮಾಣದ ನೀರಿನ ಅಂಶ ಇರುವುದರಿಂದ ಕಿತ್ತಳೆ ಹಣ್ಣು ಸೇವನೆ ನಮ್ಮ ದೇಹದಲ್ಲಿ ನೀರಿನ ಅಂಶದ ಸಮತೋಲನವಾಗಿರಿಸುತ್ತದೆ.
ಕಿತ್ತಳೆ ಹಣ್ಣು ಫೈಬರ್ ಅನ್ನು ಹೊಂದಿರುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿರುವ ಫೈಬರ್ ಹೊಟ್ಟೆಯ ಹಸಿವನ್ನು ನೀಗಿಸುತ್ತದೆ ಮತ್ತು ಕಡಿಮೆ ಆಹಾರವನ್ನು ಸೇವಿಸುವಂತೆ ಮಾಡುತ್ತದೆ. ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯುವುದು ದೇಹಕ್ಕೆ ಉತ್ತಮ ಚಟುವಟಿಕೆಯಾಗಿದೆ.
ವಿಟಮಿನ್ ಸಿ ಇದರಲ್ಲಿ ಹೇರಳವಾಗಿದೆ. ಇಕಿತ್ತಳೆಯಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ರಕ್ಷಣೆ ನೀಡುತ್ತದೆ.
ಬೀಟಾ - ಕ್ಯಾರೊಟಿನ್ ಅಂಶವನ್ನು ಹೊಂದಿದ್ದು, ಒಂದು ಶಕ್ತಿಯುತ ರೋಗ ನಿರೋಧಿಯಾಗಿದ್ದುಕೊಂಡು ತ್ವಚೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಕಿತ್ತಳೆಯಲ್ಲಿ ಸಾಕಷ್ಟು ಫೈಬರ್ ಕಂಡುಬರುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುತ್ತದೆ .