ಪಪ್ಪಾಯಲ್ಲಿರುವ ಪೋಷಕಾಂಶಗಳು

ಪಪ್ಪಾಯ ಕಾಯಿಯಲ್ಲಿ ಪೊಟ್ಯಾಸಿಯಮ್, ಫೈಬರ್, ಮೆಗ್ನೀಸಿಯಮ್ ಮತ್ತು ಕನಿಷ್ಠ ಕ್ಯಾಲೋರಿಗಳ ಜೊತೆಗೆ ವಿಟಮಿನ್ ಸಿ, ಬಿ ಮತ್ತು ಇ ನಂತಹ ಪ್ರಮುಖ ಪೋಷಕಾಂಶಗಳು ಸಮೃದ್ಧವಾಗಿದೆ.

Zee Kannada News Desk
Feb 01,2023

ಜೀರ್ಣಕ್ರೀಯೆಗೆ ಸಹಕಾರಿ

ಪಪ್ಪಾಯ ಸೇವಿಸುವುದರಿಂದ ಸೇವಿಸಿದ ಆಹಾರವು ಜೀರ್ಣವಾಗಲು ಸಹಕಾರಿಸುತ್ತದೆ.ಜೊತೆಗೆ ದೇಹವನ್ನು ಶುದ್ಧೀಕರಿಯಾಗಿರಿಸುತ್ತದೆ. ಇದು ಪಪೈನ್ ನಂತಹ ಕಿಣ್ವಗಳನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಗಾಗಿ ಗ್ಯಾಸ್ಟ್ರಿಕ್ ಆಮ್ಲಗಳ ಉತ್ತೇಜಿಸುತ್ತದೆ.

ತೂಕ ಇಳಿಕೆ ನೆರವಾಗುತ್ತದೆ

ಪಪ್ಪಾಯಿಯ ಕಾಯಿಗಳು ಪ್ರೋಟೀನ್‌, ಫೈಟೊನ್ಯೂಟ್ರಿಯೆಂಟ್‌ , ಪಪೈನ್ ಮತ್ತು ಚೈಮೊಪಪೈನ್‌ನಂತಹ ಕಿಣ್ವಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡಿ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ.

ಕಣ್ಣಿನ ಆರೋಗ್ಯ ಉತ್ತಮ

ಚರ್ಮದ ಕಾಂತಿಯನ್ನು ಕಾಪಾಡಲು ಸಹಾಯ ಮಾಡುತ್ತವೆ. ಪರಂಗಿ ಹಣ್ಣು ಸೇವನೆಯಿಂದ ದೇಹಕ್ಕೆ ಫೈಟೋನ್ಯೂಟ್ರಿಯೆಂಟ್ಸ್ ಅಂಶಗಳು ಮತ್ತು ವಿಟಮಿನ್ ಅಂಶಗಳಿಂದ ಕಣ್ಣಿನ ಆರೋಗ್ಯ ಉತ್ತಮಗೊಳಿಸುತ್ತದೆ.

ಹೀಮೋಗ್ಲೋಬಿನ್‌ ಹೆಚ್ಚಳ

ಫ್ಲೇವನಾಯ್ಡ್ ಅಂಶಗಳು ಮತ್ತು ವಿಟಮಿನ್ ಎ ಅಂಶ ಯಥೇಚ್ಛವಾಗಿ ಸಿಗುವ ಕಾರಣದಿಂದ ಹೀಮೋಗ್ಲೋಬಿನ್‌ ಹೆಚ್ಚಳ ಕಾರಣವಾಗಿದೆ.

ದೇಹದ ಉಷ್ಣತೆ ಹೆಚ್ಚಳ

ವಿಶೇಷವಾಗಿ ಚಳಿಗಾಲದಲ್ಲಿ ಪಪ್ಪಾಯಿ ಸೇವನೆ ಅತ್ಯುತ್ತಮ ಎನ್ನಲಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಳ

ಪಪ್ಪಾಯಿ ಹಣ್ಣಿನಲ್ಲಿ ಮೆಗ್ನೀಸಿಯಮ್, ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ಫೈಬರ್‌ನ ಅಂಶ ಅಧಿಕವಾಗಿದೆ. ಅಲ್ಲದೆ, ಪಪ್ಪಾಯಿ ಹಣ್ಣಿನ ಸೇವನೆ ಹೃದ್ರೋಗದ ಅಪಾಯವನ್ನು ಮಾಡುತ್ತದೆ. ಪಪ್ಪಾಯಿ ಹಣ್ಣಿನಲ್ಲಿರುವ ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ, ಇ ಮತ್ತು ಎ ಅಂಶಗಳು ಚರ್ಮ ರೋಗವನ್ನು ಬಗೆಹರಿಸಲು ಪ್ರಮುಖ ಪಾತ್ರ ವಹಿಸಲಿದೆ.

VIEW ALL

Read Next Story