2. ರಾಜ್ಮಾ: ಕಚ್ಚಾ ಅಥವಾ ಅರ್ಧ ಬೆಂದ ರಾಜ್ಮಾನಲ್ಲಿ ಫೈಟೋಹೇಮಾಗ್ಲುಟೆನಿನ್ ಹೆಸರಿನ ವಿಷಕಾರಿ ಪದಾರ್ಥ ಇರುತ್ತದೆ. ಇದು ಜಠರಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.
3. ಮೊಟ್ಟೆ: ಕಚ್ಚಾ ಅಥವಾ ಅರ್ಧ ಬೆಂದ ಮೊಟ್ಟೆ ಸಾಲ್ಮೊನೆಲಾ ಸೋಂಕಿತವಾಗಿರಬಹುದು. ಹೋಮ್ ಮೆಡ್ ಮೇಯೋನಿಸ್, ಅಥವಾ ಸೀಜರ್ ಸಲಾಡ್ ಡ್ರೆಸಿಂಗ್ ನಂತಹ ಪದಾರ್ಥಗಳಲ್ಲಿ ಕಚ್ಚಾ ಅಥವಾ ಅರ್ಧ ಬೆಂದ ಮೊಟ್ಟೆ ಸೇವನೆಯನ್ನು ತಪ್ಪಿಸಿ.
4. ಸಮುದ್ರದ ಆಹಾರ: ಕಚ್ಚಾ ಅಥವಾ ಅರ್ಧಬೆಂದ ಸಮುದ್ರದ ಆಹಾರಗಳಲ್ಲಿ ಬ್ಯಾಕ್ಟೀರಿಯಾಗಳು ಹಾಗೂ ಪರಜೀವಿಗಳು ಇರುತ್ತವೆ.
5. ಪಾಲಕ್: ಪಾಲಕ್ ಅನ್ನು ಕೂಡ ಕಚ್ಚಾ ರೂಪದಲ್ಲಿ ಸೇವಿಸಬಾರದು, ಏಕೆಂದರೆ ಅದರಲ್ಲಿರುವ ಆಕ್ಸಲಿಕ್ ಆಸಿಡ್ ಕೆಲವರಿಗೆ ಹಾನಿಯನ್ನುಂಟು ಮಾಡಬಹುದು.