ನೀವು ಆಹಾರದಲ್ಲಿ ಹಣ್ಣು-ಹಸಿರು ಸೊಪ್ಪು,ತರಕಾರಿ ಸೇವಿಸಿದ್ರೆ ಕೂದಲು ಉದುರುವಿಕೆಗೆ ಪರಿಹಾರ ದೊರೆಯುತ್ತದೆ.
ಹಸಿರು ಎಲೆ ತರಕಾರಿಗಳು ಮತ್ತು ಹಣ್ಣುಗಳು ಫೈಬರ್ನ ಸಮೃದ್ಧವಾಗಿದೆ. ಫೈಬರ್ ಕೂದಲು ಉದುರುವುದನ್ನು ತಡೆಯುತ್ತದೆ.
ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂನ ಅಮೂಲ್ಯ ಭಂಡಾರವಾಗಿರುವ ಎಳ್ಳು ಕೂದಲು ಉದುರುವಿಕೆ ಸಮಸ್ಯೆಗೆ ಉತ್ತಮ.
ನೆತ್ತಿಯ ಮೇಲೆ ಭೃಂಗರಾಜ್ ಎಣ್ಣೆ ಹಚ್ಚಿ ರಾತ್ರಿ ಮಸಾಜ್ ಮಾಡಿ, ಮರುದಿನ ಬೆಳಗ್ಗೆ ನಿಮ್ಮ ಕೂದಲು ತೊಳೆಯಿರಿ.
ಕೂದಲು ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗಿ ಕೂದಲು ಮತ್ತು ನೆತ್ತಿಯ ಆರೋಗ್ಯ ಸುಧಾರಿಸುತ್ತದೆ.
ಕೂದಲು ಉದುರುವಿಕೆ ತಡೆಯಲು ತೆಂಗಿನ ಎಣ್ಣೆ ಮತ್ತು ಬಾದಾಮಿ ಎಣ್ಣೆ ತುಂಬಾ ಉಪಯುಕ್ತವಾಗಿದೆ.
ಮೊಸರು ಸೇವಿಸುವುದರಿಂದಲೂ ಕೂದಲು ಉದುರುವುದು ಗಮನಾರ್ಹವಾಗಿ ಕಡಿಮೆಯಾಗುತ್ತದೆ.
ಕೂದಲು ಉದುರುವಿಕೆಗೆ ರೋಸ್ಮೆರಿ ಎಣ್ಣೆ ಅಥವಾ ಮೆಂತ್ಯದ ಪೇಸ್ಟ್ ತಯಾರಿಸಿ ನೆತ್ತಿಯ ಮೇಲೆ ಹಚ್ಚಿ ಶಾಂಪೂವಿನಿಂದ ಚೆನ್ನಾಗಿ ತೊಳೆಯಬೇಕು.