ವಿಟಮಿನ್ B 12 ಕೊರತೆ

ದೇಹದಲ್ಲಿ ವಿಟಮಿನ್ B 12 ಕೊರತೆಯಿಂದ ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಇದಕ್ಕೆ ಸುಲಭವಾದ ಮನೆಮದ್ದಿನ ಬಗ್ಗೆ ನಾವು ಇಂದು ನಿಮಗೆ ಮಾಹಿತಿ ನೀಡುತ್ತೇವೆ.

Puttaraj K Alur
Feb 16,2023

ಆಮ್ಲಾ ಮತ್ತು ತುಳಸಿ ಪುಡಿ ಮಿಶ್ರಣ

1 ಬೌಲ್ ಉಗುರುಬೆಚ್ಚಗಿನ ನೀರಿನಲ್ಲಿ 2 ಚಮಚ ಆಮ್ಲಾ & ತುಳಸಿ ಪುಡಿ ಮಿಶ್ರಣ ಮಾಡಿ ರಾತ್ರಿಯಿಡೀ ಇಡಿ. ಈ ಮಿಶ್ರಣವನ್ನು ಬೆಳಗ್ಗೆ ಕೂದಲಿಗೆ ಹಚ್ಚಿ 40 ನಿಮಿಷಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.

ತುಳಸಿ ಎಲೆಗಳ ನೀರು

ತುಳಸಿ ಎಲೆಗಳ ನೀರು ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಇದರ ಎಲೆಗಳಿಂದ ಮಾಡಿದ ಪೇಸ್ಟ್ ಮತ್ತು ನೀರು ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ.

ಕೂದಲು ಉದುರುವಿಕೆ & ತಲೆಹೊಟ್ಟು

ಹೆಚ್ಚು ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಒಣ ಕೂದಲಿನ ಸಮಸ್ಯೆ ಇದ್ದರೆ ತುಳಸಿ ಎಲೆಗಳನ್ನು ಬಳಸಿ ಪರಿಹಾರ ಪಡೆಯಬಹುದು.

ಹೇರ್ ಪ್ಯಾಕ್ ಬಳಸಿ

ಕರಿಬೇವಿನ ಎಲೆಗಳು ಮತ್ತು ತುಳಸಿ ಎಲೆಗಳ ಹೇರ್ ಪ್ಯಾಕ್ ಬಳಸಿ ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಬಹುದು.

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕೂದಲ ಆರೈಕೆಯಲ್ಲಿ ಅತ್ಯುತ್ತಮ ಪಾತ್ರವಹಿಸುತ್ತದೆ. ಇದರಿಂದ ಕೂದಲ ಆರೋಗ್ಯವನ್ನು ಸುಲಭವಾಗಿ ಕಾಪಾಡಬಹುದು.

ಶುಂಠಿ

ಶುಂಠಿ ಅದ್ಭುತ ಔಷಧೀಯ ಗುಣ ಒಳಗೊಂಡಿದೆ. ಇದರ ಬಳಕೆಯಿಂದ ಕೂದಲ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು.

ತೆಂಗಿನೆಣ್ಣೆ

ತೆಂಗಿನೆಣ್ಣೆ ಕೂದಲ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕಪ್ಪು ಮತ್ತು ಹೊಳೆಯುವ ಕೂದಲು ನಿಮ್ಮದಾಗಬೇಕೆಂದರೆ ತೆಂಗಿನ ಎಣ್ಣೆಯ ಆರೈಕೆ ಮಾಡುವುದು ಉತ್ತಮ.

VIEW ALL

Read Next Story