ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ತುಂಬಾ ಪ್ರಯೋಜನಕಾರಿ ಪಾನೀಯಗಳು

Yashaswini V
Apr 10,2024

ನೀರು

ಬೇಸಿಗೆಯಲ್ಲಿ ನಿಯಮಿತವಾಗಿ ನೀರು ಕುಡಿಯುವುದನ್ನು ಮರೆಯಬೇಡಿ.

ಮಜ್ಜಿಗೆ

ಬೇಸಿಗೆ ಕಾಲದಲ್ಲಿ ಮಜ್ಜಿಗೆಗಿಂತ ಉತ್ತಮವಾದ ಮತ್ತೊಂದು ಪಾನೀಯವಿಲ್ಲ. ಉತ್ತಮ ಆರೋಗ್ಯಕ್ಕಾಗಿ, ಬೇಸಿಗೆಯಲ್ಲಿ ಮಜ್ಜಿಗೆಯನ್ನು ತಪ್ಪದೇ ಕುಡಿಯಿರಿ.

ಎಳನೀರು

ನೈಸರ್ಗಿಕ ಪಾನೀಯಗಳಲ್ಲಿ ಒಂದಾಗಿರುವ ಎಳನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಇದರಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳಲು ಪ್ರಯೋಜನಕಾರಿ ಆಗಿದೆ.

ನಿಂಬೆ ಜ್ಯೂಸ್

ಬೇಸಿಗೆಯಲ್ಲಿ ನಿತ್ಯ ಒಂದು ಲೋಟ ನಿಂಬೆ ಜ್ಯೂಸ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಆದರೆ, ಇದರಲ್ಲಿ ಸಕ್ಕರೆ ಅಥವಾ ಸಕ್ಕರೆ ಪರ್ಯಾಯಗಳನ್ನು ಬಳಸಬಾರದು ಎಂಬುದನ್ನೂ ನೆನಪಿನಲ್ಲಿಡಿ.

ಪುದೀನಾ ಜ್ಯೂಸ್

ಬೇಸಿಗೆಯಲ್ಲಿ ಪುದೀನಾ ಬಳಕೆಯು ದೇಹಕ್ಕೆ ಶಾಖದಿಂದ ರಕ್ಷಣೆಯನ್ನು ನೀಡುತ್ತದೆ. ಜೊತೆಗೆ ಚಯಾಪಚಯವನ್ನು ಕೂಡ ಹೆಚ್ಚಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ಜೀರಿಗೆ, ಶುಂಠಿ ಬೆರೆಸಿ ನಿತ್ಯ ಪುದೀನಾ ಜ್ಯೂಸ್ ಸೇವಿಸಿ.

ಗಂಜಿ

ರಾಗಿ, ಬೇಳೆ ಕಾಳುಗಳಿಂದ ಹಿಟ್ಟನ್ನು ತಯಾರಿಸಿ ನಿತ್ಯ ಇದರಿಂದ ಗಂಜಿ ತಯಾರಿಸಿ ಸೇವಿಸಿ. ಬೇಕಿದ್ದರೆ ಬೇಸಿಗೆಯಲ್ಲಿ ಇದರಲ್ಲಿ ಮಜ್ಜಿಗೆಯನ್ನು ಬೆರೆಸಿ ಸೇವಿಸಬಹುದು.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story