ಅತಿಯಾದ ಅರಿಶಿನ ಬಳಕೆಯಿಂದಾಗುವ 5 ಅನಾನುಕೂಲಗಳಿವು

Yashaswini V
Nov 15,2023

ಅರಿಶಿನ

ಭಾರತೀಯ ಅಡುಗೆ ಮನೆಗಳಲ್ಲಿ ಪ್ರಮುಖ ಮಸಾಲೆ ಆಗಿರುವ ಅರಿಶಿನ ಸೌಂದರ್ಯವರ್ಧಕವೂ ಹೌದು.

ಅರಿಶಿನದ ಬಳಕೆ

ಅರಿಶಿನದ ಬಳಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆದರೆ, ಇದರ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತು ಪಡಿಸಬಹುದು.

ಉದರ ಸಮಸ್ಯೆ

ಅರಿಶಿನದ ಅತಿಯಾದ ಬಳಕೆಯೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಗ್ಯಾಸ್ಟ್ರಿಕ್

ನಿತ್ಯ ಆಹಾರದಲ್ಲಿ ಹೆಚ್ಚು ಅರಿಶಿನ ಬಳಸುವುದರಿಂದ ಇದು ಎದೆಯುರಿ, ಗ್ಯಾಸ್ಟ್ರಿಕ್ ಸಮಸ್ಯೆಗಳು ಉಲ್ಬಣಿಸುವಂತೆ ಮಾಡಬಹುದು.

ವಾಕರಿಕೆ

ಹೆಚ್ಚಿನ ಪ್ರಮಾಣದಲ್ಲಿ ಅರಿಶಿನ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಕೆಲವೊಮ್ಮೆ ವಾಕರಿಕೆಯಂತಹ ಸಮಸ್ಯೆಗಳು ಕೂಡ ಬಾಧಿಸಬಹುದು.

ಹೆಪ್ಪುಗಟ್ಟುವಿಕೆಯ ವಿರೋಧಿ

ಅರಿಶಿನವು ಹೆಪ್ಪುಗಟ್ಟುವಿಕೆಯ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಹಳದಿ ಚರ್ಮ

ನೀವು ಸೌಂದರ್ಯ ವರ್ಧಕವಾಗಿ ಅರಿಶಿನವನ್ನು ಬಳಸುವಾಗ ಮಿತವಾಗಿ ಬಳಸಬೇಕು. ನೀವು ಹೆಚ್ಚಿನ ಅರಿಶಿನವನ್ನು ಬಳಸಿದರೆ ಫೇಸ್ ವಾಶ್ ಮಾಡಿದ ಬಳಿಕವೂ ಚರ್ಮ ಹಳದಿಯಾಗಿರುತ್ತದೆ.

ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story