ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡುವ ನೈಸರ್ಗಿಕ ಮಾರ್ಗಗಳು ಇಲ್ಲಿವೆ..!

Zee Kannada News Desk
Jun 19,2024


ಕಣ್ಣು ದೇಹದಲ್ಲಿ ಬಹಳ ಮುಖ್ಯವಾದ ಅಂಗವಾಗಿದೆ. ದೇಹದ ಮೇಲೆ ವಿವಿಧ ಪರಿಣಾಮಗಳು ಬೀರುತ್ತವೆ. ಕಣ್ಣಿನ ಸಮಸ್ಯೆಗಳು ಸಂಭವಿಸುವ ಮೊದಲು ಅದನ್ನು ತಡೆಗಟ್ಟುವುದು ಉತ್ತಮ. ಇಲ್ಲಿವೆ ನೋಡಿ ಕೆಲವು ನೈಸರ್ಗಿಕ ಪರಿಹಾರಗಳು.

ನಿಂಬೆ, ಸಾಸಿವೆ

ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಂಬೆ, ಸಾಸಿವೆ ಮತ್ತು ಅಲೋವೆರಾ ಉತ್ತಮ ಪಾತ್ರವಹಿಸುತ್ತದೆ.

ಸೌತೆಕಾಯಿ

ಸೌತೆಕಾಯಿಯ ಎರಡು ಹೋಳುಗಳನ್ನು 10 ನಿಮಿಷಗಳ ಕಾಲ ಕಣ್ಣುಗಳ ಮೇಲೆ ಇಡುವುದರಿಂದ ಕಣ್ಣುಗಳಲ್ಲಿನ ಉಷ್ಣಾಂಶ ಕಡಿಮೆಯಾಗುತ್ತದೆ.

ಪಾಲಕ್

ವಾರದಲ್ಲಿ ಎರಡು ಬಾರಿ ಪಾಲಕ್ ಸೊಪ್ಪನ್ನು ತಿನ್ನುವುದರಿಂದ ನಿಮ್ಮ ಕಣ್ಣುಗಳು ಕಾಂತಿಯುತವಾಗುತ್ತವೆ.

ಗಂಜಿ

ಸೋಸಿದ ಅನ್ನದ ಗಂಜಿಗೆ ಉಪ್ಪು ಸೇರಿಸಿ ಕುಡಿದರೆ ಕಣ್ಣಿನ ಉರಿ ನಿವಾರಣೆಯಾಗುತ್ತದೆ.

ತಾಳೆ

ತಾಳೆ ಬೇರನ್ನು ನೀರಿಗೆ ಹಾಕಿ ಕುದಿಸಿ ದಿನಕ್ಕೆ 3 ಬಾರಿ ಕುಡಿದರೆ ಕಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ.

ನುಗ್ಗೆ ಸೊಪ್ಪು

ನುಗ್ಗೆ ಸೊಪ್ಪು ಕಣ್ಣಿನ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ.

ಕರಿಬೇವು

ಕರಿಬೇವಿನ ಎಲೆಯನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ವೃದ್ದಿಸುತ್ತುದೆ.


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story