ಅಣ್ಣಮ್ಮ ದೇವಾಲಯ

ಅತ್ಯಂತ ಶಕ್ತಿಶಾಲಿ ದೇವತೆಗಳಲ್ಲಿ ಅಣ್ಣಮ್ಮ ದೇವಿಯು ಐತಿಹಾಸಿಕ ಮಹತ್ವವನ್ನು ಹೊಂದಿದ್ದೂ,ಗಾಂಧಿನಗರದಲ್ಲಿ ಇರುವ ಈ ದೇವಾಲಯಕ್ಕೆ ಹೆಚ್ಚಾಗಿ ಚಲನಚಿತ್ರ ನಟ,ನಟಿಯರು ಆಗಮಿಸುತ್ತಿರುತ್ತಾರೆ.

Zee Kannada News Desk
Feb 12,2024

ಬನಶಂಕರಿ ದೇವಾಲಯ

ಬೆಂಗಳೂರಿನ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಬನಶಂಕರಿ ಅಮ್ಮನ ದೇವಾಲಯಕ್ಕೆ ನಿತ್ಯವೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ

ಇಸ್ಕಾನ್ ದೇವಾಲಯ

ಶ್ರೀ ರಾಧಾ ಕೃಷ್ಣರ ಆರಾಧನೆ ಮಾಡುವಂತಹ ಭಕ್ತರಿಗೆ ಶಾಂತಿಯನ್ನು ಕಂಡುಕೊಳ್ಳಬೇಕಾಗಿದ್ದಲ್ಲಿ ಒಮ್ಮೆ ಇಸ್ಕಾನ್‌ಗೆ ವಾರಾಂತ್ಯದಲ್ಲಿ ಒಮ್ಮೆ ಭೇಟಿ ನೀಡಿ.ನಿತ್ಯವೂ ವಿಶೇಷ ಪೂಜೆ,ಭಜನೆಗಳು ನಡೆಯುತ್ತಿರುತ್ತದೆ.

ಸೋಮೇಶ್ವರ ದೇವಾಲಯ

ಹಲಸೂರಿನಲ್ಲಿರುವ ಸೋಮೇಶ್ವರ ದೇವಾಲಯವು ಅತ್ಯಂತ ಹಳೆಯ ದೇವಾಲಯವಾಗಿದ್ದೂ,ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯೊಂದಿಗೆ ನಿರ್ವಹಿಸುತ್ತಿದೆ.ಮಹಾಶಿವರಾತ್ರಿಯ ಸಂದರ್ಭದಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ.

ಜಗನ್ನಾಥ ದೇವಾಲಯ

ಬೆಂಗಳೂರಿನ ಅಗರ ಬಳಿ ಇರುವ ಈ ದೇವಾಲಯವನ್ನು ಕಳಿಂಗ ವಾಸ್ತುಶೈಲಿಯಲ್ಲಿ ಅತ್ಯಂತ ಆಕರ್ಷಕವಾಗಿ ನಿರ್ಮಿಸಿದ್ದಾರೆ.ವಿಷ್ಣುವಿನ ಅವತಾರವಾದ ಜಗನ್ನಾಥನನ್ನು ದರ್ಶನ ಮಾಡಲು ಪ್ರತಿನಿತ್ಯ ಹೆಚ್ಚಿನ ಭಕ್ತರು,ಸಂದರ್ಶಕರು ಭೇಟಿ ನೀಡುತ್ತಾರೆ.

ದೊಡ್ಡಗಣಪತಿ

ಬಸವನಗುಡಿಯಲ್ಲಿನ ದೊಡ್ಡಗಣಪತಿಯ ವಿಗ್ರಹವು 18 ಅಡಿ ಎತ್ತರವಿದ್ದೂ,ಈ ದೇವಾಲಯವು ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ.ಬೆಣ್ಣೆಯ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುತ್ತಾರೆ.

ಶಿವೋಹಂ ದೇವಾಲಯ

65 ಅಡಿಯ ಶಿವನ ವಿಗ್ರಹವನ್ನು ಅಮೃತಶಿಲೆಯಲ್ಲಿ ನಿರ್ಮಿಸಿದ್ದೂ, ಆಕರ್ಷಕ ಶಿವನ ವಿಗ್ರಹವನ್ನು ಕಣ್ತುಂಬಿಕೊಳ್ಳಲು ಒಮ್ಮೆ ಕುಟುಂಬದೊಂದಿಗೆ,ಗೆಳೆಯರೊಂದಿಗೂ ಭೇಟಿ ನೀಡಿ.

ಶೃಂಗಗಿರಿ ದೇವಾಲಯ

ಬೆಂಗಳೂರಿನಲ್ಲಿ ಅತೀ ಆಕರ್ಷಕವಾಗಿರುವ ದೇವಾಲಯಗಳಲ್ಲಿ ಷಣ್ಮುಖ ದೇವಾಲಯವು ಒಂದಾಗಿದ್ದೂ.ಆರು ಮುಖವುಳ್ಳ ಸುಬ್ರಹ್ಮಣ್ಯ ದೇವರನ್ನು ಗೋಪುರದ ಆಕಾರದಲ್ಲಿ ನಿರ್ಮಿಸಲಾಗಿದೆ.ನಿತ್ಯವೂ ದರ್ಶನಕ್ಕೆ ಅವಕಾಶವಿದೆ.

VIEW ALL

Read Next Story