ನಿಮಗೆ ತಲೆಯಲ್ಲಿ ಒಟ್ಟಿನ ಸಮಸ್ಯೆ ಕಾಡುತ್ತಿದೆಯಾ..? ದುಬಾರಿ ಶಾಂಪು ಬಳಸಿದರೂ ಇದನ್ನು ತಡೆಗಟ್ಟಲು ಆಗಿಲ್ವಾ..? ಹಾಗಾದರೆ ಈ ಸಲಹೆ ಒಮ್ಮೆ ಟ್ರೈ ಮಾಡಿ
ಕೂದಲಿಗೆ ತಾಜಾ ಅಲೋವೆರಾ ಜೆಲ್ ಅನ್ನು ಹಚ್ಚಿ, 30 ನಿಮಿಷಗಳ ನಂತರ ಶಾಂಪೂ ಬಳಸಿ ತೊಳೆಯಿರಿ ಇದರಿಂದಾಗಿ ತಲೆ ಒಟ್ಟು ಕಡಿಮೆಯಾಗುತ್ತದೆ.
ಶಾಂಪೂ ಅಥವಾ ತೆಂಗಿಣ ಎಣ್ಣೆಯ ಜೊತೆಗೆ ಟೀಟ್ರೀ ಆಯಿಲ್ ಬೆರಸಿ ತಲೆಗೆ ಹಚ್ಚುವುದರಿಂದ ತಲೆಒಟ್ಟು ಕಡಿಮೆಯಾಗುತ್ತದೆ.
ನಿಮ್ಮ ಕೂದಲಿಗೆ ಮೊಸರು ಹಚ್ಚಿ, 30 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ಶಾಂಪೂ ಬಳಸಿ ತೊಳೆಯಿರಿ ಇದರಿಂದ ನಿಮ್ಮ ತಲೆಯಲ್ಲಿನ ಡಾಂಡ್ರಫ್ ಮಾಯವಾಗುತ್ತದೆ.
ಬೇವಿನ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ತಣ್ಣಗಾಗಲು ಬಿಡಿ. ನಂತರ, ನೀರಿನೊಂದಿಗೆ ಶಾಂಪೂವನ್ನು ಬೆರೆಸಿ, ಅದನ್ನು ನಿಮ್ಮ ಕೂದಲಿಗೆ ಹಚ್ಚಿ ವಾಶ್ ಮಾಡಿ.
ನಿಂಬೆ ರಸವನ್ನು ತಲೆ ಹಚ್ಚಿ ಮಾಸಾಜ್ ಮಾಡಿ 5 ರಿಂದ 10 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ಶಾಂಪೂ ಹಚ್ಚಿ ಮತ್ತು ನಿಮ್ಮ ತಲೆಯನ್ನು ತೊಳೆಯಿರಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.