ಬೇಸಿಗೆಯಲ್ಲಿ ಚರ್ಮದ ಆರೈಕೆಗಾಗಿ ಮನೆಮದ್ದು
ಬೇಸಿಗೆಯಲ್ಲಿ ಸುಡುವ ಬಿಸಿಲು, ಶಾಖ, ಮಾಲಿನ್ಯದಿಂದ ತ್ವಚೆ ಬಹಳ ಬೇಗ ಕಳೆಗುಂದುತ್ತದೆ. ಆದರೆ, ಕೆಲವು ಪರಿಣಾಮಕಾರಿ ಮಾರ್ಗಗಳ ಮೂಲಕ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಅಂತಹ ಮನೆಮದ್ದುಗಳೆಂದರೆ...
ನೀವು ಹೊರಗಿನಿಂದ ಮನೆಗೆ ಬಂದೊಡನೆ ತಣ್ಣೀರಿನಿಂದ ಮುಖ ತೊಳೆಯುವುದನ್ನು ಮರೆಯಬೇಡಿ
ನೀವು ಮುಖ ತೊಳೆದ ಬಳಿಕ ತಪ್ಪದೆ ಮಾಯಿಶ್ಚರೈಸರ್ ಅನ್ನು ಬಳಸಿ. ಬಿರು ಬಿಸಿಲಿನಲ್ಲಿ ಶಾಖದಿಂದ ಚರ್ಮವನ್ನು ರಕ್ಷಿಸಲು ಇದು ತುಂಬಾ ಅಗತ್ಯ.
ಬೇಸಿಗೆಯಲ್ಲಿ ಸೌತೆಕಾಯಿಯನ್ನು ತಿನ್ನುವುದರ ಜೊತೆಗೆ, ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.
ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಟೊಮ್ಯಾಟೊವನ್ನು ಮಧ್ಯ ಭಾಗಕ್ಕೆ ಕತ್ತರಿಸಿ ಅದರಿಂದ ಲಘುವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಫೇಸ್ ವಾಶ್ ಮಾಡಿ.
ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಅದನ್ನು ತುರಿದು ಶುಚಿಯಾದ ಬಟ್ಟೆ ಸಹಾಯದಿಂದ ರಸವನ್ನು ತೆಗೆಯಿರಿ. ಹತ್ತಿ ಉಂಡೆಯ ಸಹಾಯದಿಂದ ರಸವನ್ನು ಮುಖಕ್ಕೆ ಲೇಪಿಸಿ. ಅರ್ಧಗಂಟೆ ಬಳಿಕ ಮುಖ ತೊಳೆಯಿರಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.