ಕೂದಲು ಉದುರುವಿಕೆ, ಬಿಳಿಕೂದಲು ಸಮಸ್ಯೆಗೆ ಮನೆಮದ್ದುಗಳು

Bhavishya Shetty
Sep 24,2023

ಮಾಲಿನ್ಯ ಮತ್ತು ಒತ್ತಡ..

ಇತ್ತೀಚಿನ ದಿನಗಳಲ್ಲಿ ಜನರು ತಲೆಹೊಟ್ಟು, ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಅಥವಾ ಉದುರುವಿಕೆ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಮಾಲಿನ್ಯ ಮತ್ತು ಒತ್ತಡ ಆಗಿರಬಹುದು.

ಅನಾರೋಗ್ಯಕರ ಕೂದಲಿನ ಲಕ್ಷಣ...

ಸತ್ತ ಚರ್ಮದ ಕೋಶಗಳು ಬಿಳಿ ಪದರಗಳ ರೂಪದಲ್ಲಿ ತಲೆಯ ಮೇಲ್ಮೈನಲ್ಲಿ ಸಂಗ್ರಹವಾಗಲು ಪ್ರಾರಂಭವಾಗುತ್ತದೆ. ಇದು ಅನಾರೋಗ್ಯಕರ ಕೂದಲಿನ ಲಕ್ಷಣವಾಗಿದೆ.


ಇನ್ನು ನಾವಿಂದು ಈ ವರದಿಯಲ್ಲಿ ತಲೆಹೊಟ್ಟು, ಕೂದಲು ಉದುರುವಿಕೆ ಮತ್ತು ಬಿಳಿಕೂದಲಿನ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ಕೆಲ ಮನೆಮದ್ದುಗಳ ಬಗ್ಗೆ ತಿಳಿಸಲಿದ್ದೇವೆ.

ಬೇವು

ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳಿಂದ ಸಮೃದ್ಧವಾಗಿರುವ ಬೇವು, ತಲೆಹೊಟ್ಟು, ಕೂದಲಿನ ತುರಿಕೆ, ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಅದಕ್ಕೆ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ಆ ನೀರನ್ನು ಸರಳ ನೀರಿಗೆ ಬೆರೆಸಿ ಕೂದಲನ್ನು ಸ್ವಚ್ಛಗೊಳಿಸಿದರೆ ಸಾಕು.

ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಆಹಾರದಲ್ಲಿ ಮಾತ್ರವಲ್ಲದೆ ಕೂದಲಿನ ಆರೋಗ್ಯ ಕಾಪಾಡಲೂ ಸಹ ಬಳಕೆ ಮಾಡಬಹುದು. ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ, ಅದನ್ನು ನೀರಿನಲ್ಲಿ ಮಿಶ್ರಣ ಮಾಡಿ. ಈ ನೀರನ್ನು ನೆತ್ತಿಯ ಮೇಲೆ ಹಚ್ಚಿ ಸ್ವಲ್ಪ ಸಮಯದ ನಂತರ ಕೂದಲನ್ನು ಚೆನ್ನಾಗಿ ತೊಳೆಯಬೇಕು.

ಮೆಂತ್ಯ ಬೀಜ

ಕೂದಲಿನಿಂದ ತಲೆಹೊಟ್ಟು ತೆಗೆದುಹಾಕಲು ಮೆಂತ್ಯ ಬೀಜಗಳ ಹೇರ್ ಪ್ಯಾಕ್ ಅನ್ನು ಸಹ ಬಳಸಬಹುದು. ಮೆಂತ್ಯವನ್ನು ರಾತ್ರಿಯಿಡೀ ನೆನೆಸಿಡಿ. ಮುಂಜಾನೆ ಅದರ ನೀರನ್ನು ಫಿಲ್ಟರ್ ಮಾಡಿ, ಮೆಂತ್ಯೆಯನ್ನ ಪೇಸ್ಟ್ ಮಾಡಿ. ಬಳಿಕ ಕೂದಲಿಗೆ ಹಚ್ಚಿ ಒಂದು ಗಂಟೆಯ ಬಳಿಕ ಚೆನ್ನಾಗಿ ತೊಳೆಯಬೇಕು.

ಸೂಚನೆ:

ಪ್ರಿಯ ಓದುಗರೇ, ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.

VIEW ALL

Read Next Story