ಹುಳುಕಡ್ಡಿ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಇದೆ ಪರಿಹಾರ

Yashaswini V
Dec 12,2023

ಹುಳುಕಡ್ಡಿ

ಹುಳುಕಡ್ಡಿಯನ್ನು ಗಜಕರ್ಣ ಎಂತಲೂ ಕರೆಯಲಾಗುತ್ತದೆ. ಒಂದು ರಿಂಗ್‌ವರ್ಮ್ ಸಮಸ್ಯೆಯಾಗಿದ್ದು, ಇದರಿಂದಾಗಿ ದೇಹದ ವಿವಿಧ ಸ್ಥಳಗಳಲ್ಲಿ ದದ್ದುಗಳಂತಹ ಗುರುತುಗಳು ರೂಪುಗೊಳ್ಳುತ್ತವೆ.

ಹುಳುಕಡ್ಡಿಗೆ ಪರಿಹಾರ

ಹುಳುಕಡ್ಡಿ ನಿವಾರಣೆಗಾಗಿ ಮಾರುಕಟ್ಟೆಯಲ್ಲಿ ಹಲವು ಔಷಧಿಗಳು ಲಭ್ಯವಿವೆ. ಆದರೂ, ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ಇದಕ್ಕೆ ಸುಲಭ ಪರಿಹಾರ ಪಡೆಯಬಹುದು. ಅವುಗಳೆಂದರೆ...

ಕರಿಬೇವು

ಕರಿಬೇವನ್ನು ನೀರಿನಲ್ಲಿ ಅರೆದು ಅದಕ್ಕೆ ಜೇನುತುಪ್ಪ ಬೆರೆಸಿ ರಿಂಗ್‌ವರ್ಮ್ ಪೀಡಿದ ಪ್ರದೇಶದಲ್ಲಿ ಲೇಪಿಸಿ. ಇದರಿಂದ ಶೀಘ್ರದಲ್ಲೇ ಹುಳುಕಡ್ಡಿ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಪುದೀನಾ ರಸ

ರಿಂಗ್‌ವರ್ಮ್‌ ಪೀಡಿತ ಜಾಗದಲ್ಲಿ ಪುದೀನಾ ರಸವನ್ನು ಹಚ್ಚುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಬೇವಿನ ಎಲೆ

ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಈ ನೀರಿನಿಂದ ಸ್ನಾನ ಮಾಡುವುದರಿಂದ ಹುಳುಕಡ್ಡಿ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಅಲೋವೆರಾ

ಅಲೋವೆರಾ ಜೆಲ್ ಅನ್ನು ಮಜ್ಜಿಗೆಯೊಂದಿಗೆ ಬೆರೆಸಿ ಹುಳುಕಡ್ಡಿ ಪೀಡಿತ ಪ್ರದೇಶದಲ್ಲಿ ಹಚ್ಚುವುದರಿಂದ ಪರಿಹಾರ ಪಡೆಯಬಹುದು.

ಬೆಳ್ಳುಳ್ಳಿ ರಸ

ಬೆಳ್ಳುಳ್ಳಿ ರಸದೊಂದಿಗೆ ಬೇವಿನಬೀಜದ ರಸವನ್ನು ಬೆರೆಸಿ ಹಚ್ಚುವುದರಿಂದಲೂ ಹುಳುಕಡ್ಡಿ ನಿವಾರಣೆಯಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story