Thick Eye Lashes: ಕಣ್ಣಿನ ರೆಪ್ಪೆ ದಪ್ಪವಾಗಿ ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ!
ಕಣ್ಣು ಸುಂದರವಾಗಿ ಕಾಣಲು ರೆಪ್ಪೆಯು ದಪ್ಪವಾಗಿರಬೇಕು.
ಕೆಲವರಿಗೆ ನೈಸರ್ಗಿಕವಾಗಿ ರೆಪ್ಪೆಯ ಕೂದಲು ದಪ್ಪವಾಗಿರುತ್ತದೆ. ಆದರೆ ಇನ್ನೂ ಕೆಲವರಿಗೆ ಕಡಿಮೆ ಕೂದಲಿರುತ್ತದೆ.
ಸುಂದರವಾದ ರೆಪ್ಪೆ ಕೂದಲು ಹೊಂದಲು ರಾಸಾಯನಿಕಗಳಿಂದ ತುಂಬಿರುವ ವಸ್ತುಗಳ ಬದಲು ಮನೆಮದ್ದು ಬಳಸಬೇಕು.
ಉದ್ದ ಮತ್ತು ದಪ್ಪ ರೆಪ್ಪೆಯನ್ನು ಪಡೆಯಲು ನೀವು ತೆಂಗಿನ ಎಣ್ಣೆಯನ್ನು ಬಳಸಬಹುದು.
ಪ್ರತಿ ರಾತ್ರಿ ತೆಂಗಿನ ಎಣ್ಣೆಯಿಂದ ರೆಪ್ಪೆಗೆ ಮಸಾಜ್ ಮಾಡಬೇಕು. ಇದರಿಂದ ರೆಪ್ಪೆ ದಪ್ಪವಾಗಬಹುದು.
ಅಲೋವೆರಾ ಜೆಲ್ ನಿಮ್ಮ ರೆಪ್ಪೆಗೂ ಪ್ರಯೋಜನಕಾರಿಯಾಗಿದೆ.
ಹತ್ತಿಯಿಂದ ರೆಪ್ಪೆಗೂದಲುಗಳಿಗೆ ಅಲೋವೆರಾ ಜೆಲ್ ಅನ್ನು ಹಚ್ಚಿ. ಇದು ನಿಮ್ಮ ರೆಪ್ಪೆಯನ್ನು ದಪ್ಪವಾಗಿಸುತ್ತದೆ.
ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ರೆಪ್ಪೆ ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತದೆ.
ವಿಟಮಿನ್ ಇ ಕ್ಯಾಪ್ಸುಲ್ ರೆಪ್ಪೆ ಕೂದಲು ದಪ್ಪ ಮತ್ತು ಸುಂದರವಾಗಿ ಕಾಣುತ್ತದೆ.