ಬೆಳಗ್ಗೆ ಏಳುತ್ತಿದ್ದಂತೆ ಇವುಗಳನ್ನು ತಿಂದರೆ ಬೆವರಿನ ವಾಸನೆ ಬರುವುದೇ ಇಲ್ಲ!

ಬೆವರಿನ ವಾಸನೆ

ಹತ್ತು ನಿಮಿಷ ಬಿಸಿಲಿಗೆ ಹೋದರೂ ಸಾಕು ಬೆವರಿನಿಂದ ತೊಯ್ದು ಹೋಗುತ್ತೇವೆ. ಕಚೇರಿಗಳಿಗೆ ಹೋಗುವವರು ಮತ್ತು ದೂರದ ಪ್ರಯಾಣ ಮಾಡುವವರು ಬೆವರಿನಿಂದ ತಾಪತ್ರಯ ಅನುಭವಿಸುವವರೇ ಹೆಚ್ಚು. ಇದರಿಂದ ದೇಹದಿಂದ ದುರ್ವಾಸನೆ ಬರುತ್ತದೆ.

ಬೆಸ್ಟ್ ಪರಿಹಾರ

ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಸುಗಂಧ ದ್ರವ್ಯವನ್ನು ಬೆವರಿನ ವಾಸನೆ ಕಡಿಮೆ ಮಾಡಲು ಬಳಕೆ ಮಾಡುತ್ತೇವೆ. ಆದರೆ ಅದಕ್ಕಿಂತ ಬೆಸ್ಟ್ ಕೆಲ ಪರಿಹಾರಗಳನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಮನೆಯಲ್ಲಿಯೇ ಮುಂಜಾಗ್ರತೆ ವಹಿಸಿಕೊಂಡು ಇವುಗಳನ್ನು ಬಳಕೆ ಮಾಡಬಹುದು.

ಶವರ್ ಬಾತ್:

ಬೇಸಿಗೆಯಲ್ಲಿ ಎರಡು ಬಾರಿ ಶವರ್ ಬಾತ್ ಮಾಡುವುದು ಒಳ್ಳೆಯದು. ಹೀಗೆ ಮಾಡಿದರೆ ದೇಹದ ದುರ್ವಾಸನೆ ಕಡಿಮೆಯಾಗುತ್ತದೆ. ಬಿಸಿನೀರನ್ನು ಬಳಕೆ ಮಾಡದಿರುವುದು ಉತ್ತಮ. ಟೀ ಟ್ರೀ, ಲ್ಯಾವೆಂಡರ್ ಮತ್ತು ರೋಸ್ಮರಿ ಮುಂತಾದ ತೈಲಗಳನ್ನು ಕೂಡ ನೀರಿನಲ್ಲಿ ಮಿಕ್ಸ್ ಮಾಡಿ ಸ್ನಾನ ಮಾಡಿದರೆ ಉತ್ತಮ

ಅಲೋವೆರಾ

ಅಲೋವೆರಾ ಆಂಟಿ-ಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದರ ತಿರುಳನ್ನು ತೆಗೆದುಕೊಂಡು ಹತ್ತಿಯ ಸಹಾಯದಿಂದ ಬೆವರು ಇರುವ ಸ್ಥಳಗಳಿಗೆ ಹಚ್ಚಿ. ಹತ್ತು ನಿಮಿಷಗಳ ನಂತರ ತೊಳೆಯಿರಿ. ದಿನಕ್ಕೆ ಒಮ್ಮೆ ಈ ಪರಿಹಾರ ಅನುಸರಿಸಿದರೆ, ಬೆವರು ವಾಸನೆ ಕಡಿಮೆಯಾಗುತ್ತದೆ.

ಬೇವು

ಬೆವರು ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಬೇವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದ್ದರಿಂದ ಬೇವನ್ನು ಪೇಸ್ಟ್’ನಂತೆ ಮಾಡಿ ಬೆವರುತ್ತಿರುವ ತೋಳುಗಳು ಅಥವಾ ಪಾದಗಳ ಅಡಿಯಲ್ಲಿ ಹಚ್ಚಿ. ಅರ್ಧ ಗಂಟೆ ಹಾಗೆ ಇಟ್ಟು ಸ್ವಲ್ಪ ನಂತರ ತೊಳೆಯಿರಿ. ಪ್ರತಿದಿನ ಮಾಡಿದರೆ ಬೆಸ್ಟ್.

ಆಲೂಗಡ್ಡೆ

ಆಲೂಗಡ್ಡೆಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ. ಇದನ್ನು ಬೆವರುವ ಪ್ರದೇಶಗಳು, ಕುತ್ತಿಗೆ, ಕಂಕುಳ ಮತ್ತು ಪಾದಗಳ ಮೇಲೆ ಉಜ್ಜಿ. ಇದು ಬಹಳಷ್ಟು ವ್ಯತ್ಯಾಸವನ್ನುಂಟುಮಾಡುತ್ತದೆ.

ನೀರು

ನೀರು ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ಪುರುಷರು ದಿನಕ್ಕೆ ಕನಿಷ್ಠ ಮೂರೂವರೆ ಲೀಟರ್ ನೀರನ್ನು ಕುಡಿದರೆ, ಮಹಿಳೆಯರು ಎರಡೂವರೆಯಿಂದ ಮೂರು ಲೀಟರ್ ನೀರನ್ನು ಕುಡಿಯಬೇಕು. ಬೆಳಗ್ಗೆ ಏಳುತ್ತಿದ್ದಂತೆ ನೀರು ಕುಡಿದರೆ ಬೆವರಿನ ವಾಸನೆ ಕ್ರಮೇಣ ದೂರವಾಗುತ್ತದೆ.

ನೆನೆಸಿಟ್ಟ ಮೆಂತ್ಯ

ನೆನೆಸಿಟ್ಟ ಮೆಂತ್ಯಯನ್ನು ನೀರು ಸಮೇತ ಕುಡಿದರೆ ಬೆವರಿನ ವಾಸನೆ ಕಡಿಮೆಯಾಗುತ್ತದೆ. ಮಲಗುವ ಮುನ್ನ ಅಥವಾ ಮುಂಜಾನೆ ಏಳುತ್ತಿದ್ದಂತೆ ಇದನ್ನು ಸೇವಿಸಿದರೆ ಉತ್ತಮ.

ಸೂಚನೆ:

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story