ಬೋಳು ತಲೆಗೆ ಮನೆಮದ್ದು

ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿ, ಆಹಾರದ ಕೊರತೆ ಮತ್ತು ಒತ್ತಡದಿಂದಾಗಿ ಜನರು ಬೇಗನೆ ಬೋಳು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ನಾವಿಂದು ಬೋಳು ತಲೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಮನೆಮದ್ದುಗಳನ್ನು ನಿಮಗೆ ತಿಳಿಸಲಿದ್ದೇವೆ.

Bhavishya Shetty
Jul 09,2023

ಬೋಳು ತಲೆಗೆ ಮನೆಮದ್ದು

ಮಾನಸಿಕ ಒತ್ತಡ, ಪ್ರೋಟೀನ್ ಮತ್ತು ವಿಟಮಿನ್ ಕೊರತೆ, ನೆತ್ತಿಯ ಸೋಂಕು, ದೇಹದಲ್ಲಿ ರಕ್ತದ ಕೊರತೆಯಿಂದ ಸಾಮಾನ್ಯವಾಗಿ ಬೋಳು ತಲೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಈರುಳ್ಳಿ ರಸ

ತಲೆಯಲ್ಲಿ ಹೊಸ ಕೂದಲು ಬೆಳೆಯಲು ಈರುಳ್ಳಿ ರಸ ತುಂಬಾ ಪ್ರಯೋಜನಕಾರಿ. ಈರುಳ್ಳಿಯನ್ನು ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ರುಬ್ಬಿ, ಅದರ ರಸವನ್ನು ಹಿಂಡಿ. ಬಳಿಕ ಹತ್ತಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಈ ರಸವನ್ನು ಹಚ್ಚಿರಿ.

ಆಪಲ್ ವಿನೆಗರ್

ಆಪಲ್ ವಿನೆಗರ್ ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಒಂದು ಬಟ್ಟಲಿನಲ್ಲಿ ಸೇಬು ವಿನೆಗರ್ ಮತ್ತು ಅದೇ ಪ್ರಮಾಣದ ನೀರನ್ನು ಮಿಶ್ರಣ ಮಾಡಿ. ಇದನ್ನು ಬ್ರಷ್ನ ಸಹಾಯದಿಂದ ಕೂದಲಿಗೆ ಹಚ್ಚಿ. ಮಸಾಜ್ ಮಾಡಿ. ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.

ಅಲೋವೆರಾ

ಅಲೋವೆರಾ ಹೊಸ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರ ತಿರುಳನ್ನು ತೆಗೆದು ತಲೆಗೆ ಹಚ್ಚಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಮೊಟ್ಟೆ

ಮೊಟ್ಟೆ ಆರೋಗ್ಯಕ್ಕೆ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕಿಸಿ, ಕೂದಲಿಗೆ ಹಚ್ಚಿ. ಒಣಗಿದ ನಂತರ ಅದನ್ನು ಶ್ಯಾಂಪೂ ಬಳಸಿ ತೊಳೆಯಿರಿ.


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story