ಒಣ ತ್ವಚೆಯಿಂದ ಪರಿಹಾರಕ್ಕಾಗಿ ಮನೆಮದ್ದು

Yashaswini V
Dec 05,2023

ಒಣ ತ್ವಚೆ

ಒಣ ತ್ವಚೆ ಅಥವಾ ಒರಟಾದ ಚರ್ಮವು ಮುಖವನ್ನು ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ.

ಮನೆಮದ್ದು

ಇದಕ್ಕಾಗಿ ಹಲವು ಬಗೆಯ ಲೋಷನ್ ಮತ್ತು ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ, ಕೆಲವು ಸರಳ ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ ಬಳಕೆಯಿಂದ ಚರ್ಮ ತೇವಾಂಶವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದರ ಜೊತೆಗೆ ಇದು ಚರ್ಮವನ್ನು ಪೋಷಿಸಲು, ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಅಲೋವೆರಾ

ಅಲೋವೆರಾ ಬಳಕೆಯು ಒಣ ಚರ್ಮವನ್ನು ಹೈಡ್ರೇಟ್ ಮಾಡುವ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.

ಜೇನು ತುಪ್ಪ

ಜೇನುತುಪ್ಪವು ನೈಸರ್ಗಿಕ ಹ್ಯೂಮೆಕ್ಟಂಟ್ ಆಗಿದೆ. ಜೇನುತುಪ್ಪವು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ಚರ್ಮದ ಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸುತ್ತದೆ.

ಸೌತೆಕಾಯಿ

ಸೌತೆಕಾಯಿಯಲ್ಲಿ 96% ನೀರು ಇದೆ. ಸೌತೆಕಾಯಿಯು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳನ್ನು ಹೊಂದಿದ್ದು ಅದು ಒಟ್ಟಾರೆ ಚರ್ಮದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ರೋಸ್ ವಾಟರ್

ರೋಸ್ ವಾಟರ್ ಬಳಕೆಯಿಂದಲೂ ಡ್ರೈ ಸ್ಕಿನ್ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story