ಮುಖದ ಮೇಲೆ ಕೆಂಪು ಕಲೆಗಳು ಇದ್ದರೆ, ತುರಿಕೆ, ಬರ್ನಿಂಗ್ ಸಮಸ್ಯೆ ಇದ್ದಲ್ಲಿ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ. ಆದರೆ, ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡಿ.
ಟೊಮ್ಯಾಟೋ ತಿರುಳನ್ನು ಮುಖಕ್ಕೆ ಅನ್ವಯಿಸುವುದರಿಡ್ನ ಮುಖದ ಮೇಲಿರುವ ಕಲೆಗಳನ್ನು ಸುಲಭವಾಗಿ ನಿವಾರಿಸಬಹುದು.
ನಿಂಬೆ ರಸವನ್ನು ಮುಖಕ್ಕೆ ಅಪ್ಲೈ ಮಾಡಿ 5 ನಿಮಿಷಗಳ ಕಾಲ ಬಿಟ್ಟು ನಂತರ ಶುದ್ಧವಾದ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಕಲೆ ನಿವಾರಣೆಯಾಗುತ್ತದೆ.
ಮುಖದಲ್ಲಿ ಮೊಡವೆಯಿಂದ ಉಂಟಾಗಿರುವ ಕಲೆ ನಿವಾರಣೆಗೆ ಅಲೋವೆರಾ ಜೆಲ್ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ.
ಸೌತೆಕಾಯಿ ರಸವು ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.
ಆಪಲ್ ಸೈಡರ್ ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಇದೂ ಕೂಡ ಚರ್ಮದಲ್ಲಿನ ಕಲೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬಾಳೆಹಣ್ಣಿನ ಸಿಪ್ಪೆಯು ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಉತ್ತಮ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತದೆ.