ಕಾಂತಿಯುತ ತ್ವಚೆಗಾಗಿ ನೈಸರ್ಗಿಕ ಪದಾರ್ಥಗಳು ಮತ್ತು ಮನೆಮದ್ದು ಬಹುತೇಕ ಪ್ರಥಮ ಆಯ್ಕೆಯಾಗಿರುತ್ತದೆ.
ಒರಟು ಚರ್ಮದಿಂದ ಮೊಡವೆಗಳವರೆಗಿನ ಸಮಸ್ಯೆ ಪರಿಹಾರಕ್ಕಾಗಿ ಜೇನುತುಪ್ಪವನ್ನು ಬಳಸಲಾಗುತ್ತದೆ.
ಆರೋಗ್ಯಕರ ತ್ವಚೆಗಾಗಿ ಮೊಸರು ಬಳಸುವ ವಿಧಾನವೇ ಬಹುತೇಕ ಯುವತಿಯರ ಆಯ್ಕೆ ಎನ್ನುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ.
ಅಲೋವೆರಾವನ್ನು ಮುಖಕ್ಕೆ ಹಚ್ಚುವ ಮೂಲಕ ಅಥವಾ ಸೇವನೆ ಮೂಲಕ ಆರೋಗ್ಯವಂತ ಮತ್ತು ಸುಂದರ ತ್ವಚೆ ಪಡೆದುಕೊಳ್ಳಬಹುದು.
ತ್ವಚೆಯ ಆರೈಕೆಗಾಗಿ ಮುಖವನ್ನು ಅಕ್ಕಿ ನೀರಿನಿಂದ ತೊಳೆಯಬೇಕು. ಹೀಗೆ ಮಾಡುತ್ತಾ ಬಂದರೆ ಮುಖ ಕಾಂತಿ ಹೊಳಪು ಹೆಚ್ಚುತ್ತದೆ.
ಕಡಲೆ ಹಿಟ್ಟಿನೊಂದಿಗೆ ಅರ್ಧ ಚಮಚ ಅರಿಶಿನ ಪುಡಿಯನ್ನು ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖ ಫಳ ಫಳನೇ ಹೊಳೆಯುತ್ತದೆ.
ಪಪ್ಪಾಯಿಯಲ್ಲಿ ವಿಟಮಿನ್ ಎ ಮತ್ತು ಪಪೈನ್ ಇರುವ ಕಾರಣ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಹಿಸುಕಿದ ಪಪ್ಪಾಯವನ್ನು ಜೇನುತುಪ್ಪದೊಂದಿಗೆ ಮುಖಕ್ಕೆ ಹಚ್ಚಬೇಕು.
ಸೌತೆಕಾಯಿಯನ್ನು ತುರಿದು ಅದರಲ್ಲಿ ಒಂದು ಚಮಚ ಮೊಸರು ಸೇರಿಸಿ ಮುಖಕ್ಕೆ ಹಚ್ಚಿ. 5 ನಿಮಿಷಗಳ ಕಾಲ ಹಾಗೆಯೇ ಬಿಟು ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.