ಡೆಡ್ ಸ್ಕಿನ್ ಸಮಸ್ಯೆ ಮತ್ತು ಬೆವರಿನಿಂದಾಗಿ ಕುತ್ತಿಗೆ ಸುತ್ತ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಹುಡುಗಿಯರು ಮತ್ತು ಮಹಿಳೆಯರಿಗೆ ಇದೊಂದು ದೊಡ್ಡ ಸಮಸ್ಯೆ ಎಂದರೂ ತಪ್ಪಾಗುವುದಿಲ್ಲ. ಇದರಿಂದ ಪರಿಹಾರ ಪಡೆಯಲು ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ.

Yashaswini V
Mar 14,2023

ಆಪಲ್ ಸೈಡರ್ ವಿನೆಗರ್

2 ಚಮಚ ಆಪಲ್ ಸೈಡರ್ ವಿನೆಗರ್ ಅನ್ನು 4 ಚಮಚ ನೀರಿನಲ್ಲಿ ಬೆರೆಸಿ ಕುತ್ತಿಗೆಯ ಸುತ್ತ ಅಪ್ಪ್ಲೈ ಮಾಡಿ. 10 ನಿಮಿಷಗಳ ಬಳಿಕ ವಾಶ್ ಮಾಡಿ. ನಿತ್ಯ ಈ ರೀತಿ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಪಡೆಯಬಹುದು.

ನಿಂಬೆ ರಸ

ನಿಂಬೆ ರಸಕ್ಕೆ ಒಂದೆರಡು ಚಮಚ ಅಲೋವೆರಾ ಜೆಲ್ ಅನ್ನು ಮಿಕ್ಸ್ ಮಾಡಿ. ಈ ಮಿಶ್ತ್ರನವನ್ನು ಕುತ್ತಿಗೆ ಭಾಗಕ್ಕೆ ಅನ್ವಯಿಸಿ. ಎರಡರಿಂದ ಮೂರು ನಿಮಿಷ ಮಸಾಜ್ ಮಾಡಿ. ಗಳಿಕ ಉಗುರು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ.

ಸೌತೆಕಾಯಿ ರಸ

ಕುತ್ತಿಗೆಯ ಕಪ್ಪನ್ನು ಹೋಗಲಾಡಿಸಲು ಸೌತೆಕಾಯಿಯನ್ನು ತುರಿದು ಕುತ್ತಿಗೆಗೆ ಹಚ್ಚಿಕೊಳ್ಳಿ. ನೀವು ಬಯಸಿದರೆ, ನೀವು ಅದರ ರಸವನ್ನು ಸಹ ಅನ್ವಯಿಸಬಹುದು.

ಅಡಿಗೆ ಸೋಡಾ

ಅಡಿಗೆ ಸೋಡಾ ಬಳಕೆಯು ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆ ನಿವಾರಣೆಗೆ ತುಂಬಾ ಪ್ರಯೋಜನಕಾರಿ ಆಗಿದೆ. 2-3 ಚಮಚ ಅಡಿಗೆ ಸೋಡಾವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ನಯವಾದ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕುತ್ತಿಗೆಗೆ ಹಚ್ಚಿ. ಅದು ಚೆನ್ನಾಗಿ ಒಣಗಿದ ಬಳಿಕ ವಾಶ್ ಮಾಡಿ.

ಜೇನುತುಪ್ಪ

ಟೊಮೆಟೊ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುತ್ತಿಗೆಗೆ ಹೆಚ್ಚಿ 20 ನಿಮಿಷಗಳ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಫಲಿತಾಂಶ ಗೋಚರಿಸುತ್ತದೆ.

ಆಲೂಗೆಡ್ಡೆ ರಸ

ಆಲೂಗೆಡ್ಡೆ ರಸವನ್ನು ಅತ್ಯುತ್ತಮ ಬ್ಲೀಚ್ ಎಂದು ಬಣ್ಣಿಸಲಾಗುತ್ತದೆ. ಇದು ಪಿಗ್ಮೆಂಟೇಶನ್ ಸೇರಿದಂತೆ ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು. ಪೀಡಿತ ಪ್ರದೇಶದಲ್ಲಿ ಆಲೂಗೆಡ್ಡೆ ರಸವನ್ನು ಅನ್ವಯಿಸಿ 15-20 ನಿಮಿಷಗಳ ಬಳಿಕ ತೊಳೆಯಿರಿ.

VIEW ALL

Read Next Story