ಸಾಮಾನ್ಯವಾಗಿ ಎಣ್ಣೆ ತ್ವಚೆ ಸಮಸ್ಯೆ ಇರುವವರಲ್ಲಿ ಮೂಗಿನ ಮೇಲೆ ಹೆಚ್ಚುವರಿ ಎಣ್ಣೆ ಕಾಣಿಸಿಕೊಳ್ಳುತ್ತದೆ.
ಎಣ್ಣೆಯುಕ್ತ ಮೂಗಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳು ಹೆಚ್ಚು ಪ್ರಯೋಜನಕಾರಿ ಆಗಿವೆ. ಅವುಗಳೆಂದರೆ...
ನೀವು ಎಣ್ಣೆಯುಕ್ತ ತ್ವಚೆಯ ಸಮಸ್ಯೆಯನ್ನು ಹೊಂದಿದ್ದರೆ ದಿನಕ್ಕೆ ನಾಲ್ಕೈದು ಬಾರಿಯಾದರೂ ಫೇಸ್ ವಾಶ್ ಮಾಡಿ.
ಎಣ್ಣೆಯುಕ್ತ ಮೂಗಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ನಿಂಬೆ ಅತ್ಯುತ್ತಮ ಮನೆಮದ್ದು. ಒಂದು ಹತ್ತಿ ಉಂಡೆಯನ್ನು ತೆಗೆದುಕೊಂಡು ಅದರಲ್ಲಿ ಒಂದೆರಡು ಹನಿ ನಿಂಬೆರಸ ಹಾಕಿ ಮೂಗಿನ ಮೇಲೆ, ಮೂಗಿನ ಸಂಧಿಯಲ್ಲಿ ಚೆನ್ನಾಗಿ ಒರೆಸಿ. ಈ ರೀತಿ ಮಾಡುವುದರಿಂದ ಶೀಘ್ರದಲ್ಲೇ ಪರಿಹಾರ ಪಡೆಯಬಹುದು.
ಎಣ್ಣೆಯುಕ್ತ ಚರ್ಮದ ವಿರುದ್ಧ ಹೋರಾಡಲು ಬಾದಾಮಿ ಪರಿಣಾಮಕಾರಿಯಾಗಿದೆ. ಇದಕ್ಕಾಗಿ, ಬಾದಾಮಿಯನ್ನು ತುರಿದು ಅದರಲ್ಲಿ ಒಂದೆರಡು ಹನಿ ಜೇನುತುಪ್ಪವನ್ನು ಬೆರೆಸಿ ಸ್ಕ್ರಬ್ ರೀತಿ ಬಳಸಿ. ಬಳಿಕ ಫೇಸ್ ವಾಶ್ ಮಾಡಿ.
ವಿನೆಗರ್ ಗೆ ಸ್ವಲ್ಪ ನೀರು ಬೆರೆಸಿ ಹತ್ತಿ ಉಂಡೆ ಸಹಾಯದಿಂದ ಆ ನೀರನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಉಜ್ಜಿಕೊಳ್ಳಿ. 15 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.
ಒಂದು ಚಮಚ ಶ್ರೀಗಂಧ ಮತ್ತು ಒಂದು ಚಮಚ ಹಾಲನ್ನು ಬೆರೆಸಿ ಪೇಸ್ಟ್ ತಯಾರಿಸಿ ಮೂಗಿಗೆ ಹಚ್ಚಿ 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.