ಮನೆಯಲ್ಲೇ ತಯಾರಿಸಿ ಆರೋಗ್ಯಕರ-ರುಚಿಕರ ಎಳನೀರು ಕೇಕ್

Bhavishya Shetty
Aug 24,2023


ನೀವು ಎಂದಾದರೂ ಎಳನೀರು ಕೇಕ್ ತಿಂದಿದ್ದೀರಾ? ಇಲ್ಲವಾದಲ್ಲಿ ನಾವಿಂದು ನಿಮಗೆ ಎಳನೀರು ಕೇಕ್ ತಯಾರಿಸುವುದರ ಸುಲಭ ವಿಧಾನವನ್ನು ತಿಳಿಸಿಕೊಡಲಿದ್ದೇವೆ.


ಎಳನೀರು ನೈಸರ್ಗಿಕವಾಗಿ ಸಿಗುವ ಆರೋಗ್ಯ ಕಣಜ ಎಂದರೆ ತಪ್ಪಾಗಲ್ಲ. ಇದನ್ನು ಕೇಕ್ ಮಾಡಿಕೊಂಡು ಕೂಡ ತಿನ್ನಬಹುದು. ಅದಕ್ಕೆ ಬೇಕಾದ ಸಾಮಾಗ್ರಿಗಳು ಇಂತಿವೆ.


ಮೈದಾ ಹಿಟ್ಟು - 1 ಕಪ್, ಸಕ್ಕರೆ - ¾ ಕಪ್, ಮೊಟ್ಟೆ – 2, ದಪ್ಪ ತೆಂಗಿನ ಹಾಲು ಅಥವಾ ಹಾಲು - ½ ಕಪ್, ಎಣ್ಣೆ - ¼ ಕಪ್, ವೆನಿಲ್ಲಾ ಎಸೆನ್ಸ್ - 1 ಟೀಸ್ಪೂನ್, ಬೇಕಿಂಗ್ ಪೌಡರ್ - 1 ಟೀಸ್ಪೂನ್, ಉಪ್ಪು – ಚಿಟಿಕೆಯಷ್ಟು, ಎಳನೀರು- 2, ವಿಪ್ಪಿಂಗ್ ಕ್ರೀಮ್ - ½ ಲೀಟರ್, ಐಸಿಂಗ್ ಶುಗರ್ - 4 ಟೀ ಸ್ಪೂನ್,


ತಯಾರಿಸುವ ವಿಧಾನ ನೋಡೋಣ. ಮೈದಾ ಹಿಟ್ಟು, ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಒಟ್ಟಿಗೆ ತೆಗೆದುಕೊಂಡು ಜರಡಿ, ಬಳಿಕ ಪಕ್ಕಕ್ಕಿಡಿ. ಮತ್ತೊಂದು ಪಾತ್ರೆಯಲ್ಲಿ ಮೊಟ್ಟೆ ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.


ಇನ್ನೊಂದೆಡೆ ತೆಂಗಿನ ಹಾಲು ಅಥವಾ ಸಾಮಾನ್ಯ ಹಾಲನ್ನು ಬಿಸಿ ಮಾಡಿ (ಕುದಿಯುವ ಅಗತ್ಯವಿಲ್ಲ). ಅದು ಬಿಸಿಯಾದಾಗ ಎಣ್ಣೆ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಬೀಟ್ ಮಾಡಿಟ್ಟ ಮೊಟ್ಟೆ-ಸಕ್ಕರೆ ಮಿಶ್ರಣಕ್ಕೆ ಜರಡಿ ಹಿಟ್ಟು ಮತ್ತು ಹಾಲು, ಎಣ್ಣೆ, ವೆನಿಲ್ಲಾ ಮಿಶ್ರಣವನ್ನು ಸೇರಿಸಿ.


ಈ ಮಿಶ್ರಣವನ್ನು ಎಣ್ಣೆ ಅಥವಾ ತುಪ್ಪ ಹಚ್ಚಿಟ್ಟ ಬೇಕಿಂಗ್ ಟಿನ್’ಗೆ ಹಾಕಿ. ಇದನ್ನು 180 ಡಿಗ್ರಿ ಸೆಲ್ಸಿಯಸ್’ನಲ್ಲಿ ಕಾಯಿಸಲ್ಪಟ್ಟಿರುವ ದೊಡ್ಡ ಪಾತ್ರೆಯೊಳಗಿಟ್ಟು ಮುಚ್ಚಳ ಹಾಕಿ 30 ನಿಮಿಷಗಳ ಕಾಲ ಬೇಯಿಸಿ.


ಬೆಂದ ಬಳಿಕ ಹೊರತೆಗೆದು ಕೇಕ್ ಸ್ಪಾಂಜ್ ಮೇಲೆ ಸಕ್ಕರೆ ನೀರನ್ನು ಸಿಂಪಡಿಸಬೇಕು. ನಂತರ ಇದಕ್ಕೆ ವಿಪ್ಪಿಂಗ್ ಕ್ರೀಮ್ ಮಿಶ್ರಣ, ತೆಂಗಿನ ತುಂಡುಗಳ ಮೂಲಕ ಗಾರ್ನಿಶ್ ಮಾಡಿ. ಬಳಿಕ 30 ನಿಮಿಷದಿಂದ 1 ಗಂಟೆಗಳ ಕಾಲ ಫಿಡ್ಜ್’ನಲ್ಲಿಡಿ. ಇದಾದ ನಂತರ ಹೊರತೆಗೆದು ಕೇಕ್ ಮಾದರಿಯಲ್ಲಿ ಕಟ್ ಮಾಡಿ ಸರ್ವ್ ಮಾಡಿ.

VIEW ALL

Read Next Story