ತರಾತುರಿಯಲ್ಲಿ ಅಡುಗೆ ಮಾಡುವಾಗ ಒಮ್ಮೊಮ್ಮೆ ಉಪ್ಪು ಹೆಚ್ಚಾಗುತ್ತದೆ. ಕೆಲವೊಮ್ಮೆ ಅರಶಿನ ಹೆಚ್ಚಾಗುತ್ತದೆ. ಅರಶಿನ ಹೆಚ್ಚಾದಾಗ ಅಡುಗೆಯ ಬಣ್ಣ, ಘಮ ಎರಡೂ ಕೆಡುತ್ತದೆ.
ಅಡುಗೆಯಲ್ಲಿ ಅರಶಿನ ಹೆಚ್ಚಾದರೆ ಅದಕ್ಕೆ ಹಾಲಿನ ಕೆನೆ ಸೇರಿಸಿ. ಇದರಿಂದ ಅರ್ಶಿನದ ಕಹಿ ಮಾಯವಾಗುತ್ತದೆ.
ಇನ್ನೊಂದು ಉಪಾಯವೆಂದರೆ ತಕ್ಷಣ ಮೊಸರು ಸೇರಿಸಿ ಮಿಕ್ಸ್ ಮಾಡಿ. ಹೀಗೆ ಮಾಡಿದಾಗ ಬಣ್ಣವೂ ಸರಿಯಾಗುತ್ತದೆ. ಘಮ ಕೂಡಾ ಸರಿ ಹೊಂದುತ್ತದೆ.
ತೆಂಗಿನ ಕಾಯಿ ಹಾಲು ಕೂಡಾ ಬಳಸಬಹುದು. ಅರಶಿನ ಹೆಚ್ಚಾಗಿದ್ದರೆ ತೆಂಗಿನ ಹಾಲು ಬೆರೆಸಿ ಬೇಯಿಸಿಕೊಳ್ಳಿ. ಇದರಿಂದ ಅಡುಗೆಯ ರುಚಿ ಕೂಡಾ ಹೆಚ್ಚುತ್ತದೆ.
ಅರಶಿನ ಹೆಚ್ಚಾಗಿದ್ದಾಗ ಆಮ್ ಚೂರ್ ಹಾಕಿ ಕೂಡಾ ರುಚಿಮತ್ತು ಪರಿಮಳವನ್ನು ಸರಿದೂಗಿಸಬಹುದು.
ಪಲ್ಯದಲ್ಲಿ ಅರಶಿನ ಹೆಚ್ಚಾದರೆ ನಿಂಬೆ ರಸ ಬೆರೆಸಿ ಬ್ಯಾಲೆನ್ಸ್ ಮಾಡಿಕೊಳ್ಳಬಹುದು.
ಅರಶಿನ ಹೆಚ್ಚಾಗಿ ರುಚಿ ಕೆಟ್ಟ ಅಡುಗೆಗೆ ಗೋಡಂಬಿ ಪೇಸ್ಟ್ ಬೆರೆಸಿ. ಹೀಗೆ ಮಾಡಿದರೆ ಅಡುಗೆಯ ರುಚು ದುಪ್ಪಟ್ಟಾಗುವುದು.
ಅಡುಗೆಗೆ ಅರಶಿನ ಹೆಚ್ಚಾದರೆ ಹಾಲಿಗೆ ಸ್ವಲ್ಪ ಸಕ್ಕರೆ ಬೆರೆಸಿ ಅಡುಗೆಗೆ ಬಳಸಿ. ಹೀಗೆ ಮಾಡಿದಾಗ ಅರ್ಶಿನದ ಕಹಿ ಹೋಗುತ್ತದೆ.