ಮನೆ ಮುಂದೆಯೇ ಹೀಗೆ ಬೆಳೆಸಿ ಮಲ್ಲಿಗೆ ಗಿಡ

Ranjitha R K
Aug 30,2023


ಮಲ್ಲಿಗೆ ಹೂವನ್ನು ನು ಬಹುತೇಕ ಮನೆಗಳಲ್ಲಿ ಪೂಜೆಗೆ ಬಳಸುತ್ತಾರೆ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ನೀವು ಅದನ್ನು ಮನೆಯಲ್ಲಿ ಸುಲಭವಾಗಿ ನೆಡಬಹುದು.


ಮನೆಯಲ್ಲಿ ಮಲ್ಲಿಗೆ ಗಿಡವನ್ನು ನೆಡುವ ಯೋಚನೆ ಇದ್ದರೆ ಒಂದು ಪಾಟ್ ಅಥವಾ ಬಾಲ್ಟಿಯಲ್ಲಿ ನೆಡಬಹುದು.


ಸಾಧ್ಯವಾದಷ್ಟು ಹಳೆಯ ಲೋಹದ ಬಕೆಟ್ ನಲ್ಲಿ ಗಿಡವನ್ನು ನೆಡಿ. ಆದರೆ ಗಿಡ ನೆಡುವ ಮುನ್ನ ಬಕೆಟ್ ಕೆಳಗೆ ಎರಡು ಅಥವಾ ಮೂರು ತೂತು ಮಾಡಿಕೊಳ್ಳಿ.


ಮರಳು, ಕೊಕಾಪಿಟ್ , ಒರ್ಗ್ಯಾನಿಕ್ ರಸಗೊಬ್ಬರವನ್ನು ಮೊದಲೇ ಮಿಕ್ಸ್ ಮಾಡಿಟ್ಟುಕೊಳ್ಳಿ.


ನೆಡುವಾಗ ಸಣ್ಣ ಸಸಿಯನ್ನೇ ನಡಿ. ಹೀಗಾದಾಗ ಅದರ ಆರೈಕೆ, ಪೋಷಣೆ ಎಲ್ಲವೂ ಸುಲಭವಾಗುತ್ತದೆ.


ಈ ಸಸಿಗೆ ಬೆಳಿಗ್ಗೆ ಮತ್ತು ಸಂಜೆ ಬಿಸಿಲು ಬೇಕು. ಪಾಟ್ ನ ಮಣ್ಣು ಒಣಗದಂತೆ ನೋಡಿಕೊಳ್ಳಿ.


ಬೆಳಿಗ್ಗೆ ಮತ್ತು ಸಂಜೆ ಎರಡೂ ವೇಳೆ ನೀರು ಹಾಕಬೇಕು.


ಮಲ್ಲಿಗೆ ಹೂವು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.


ನೀವು ಕೂಡಾ ಮನೆಯ ಮುಂದೆ ಮಲ್ಲಿಗೆ ಗಿಡ ಹಾಕಬೇಕಾದರೆ ಈ ಟಿಪ್ಸ್ ಅನುಸರಿಸಿ

VIEW ALL

Read Next Story